ಬೆಂಗಳೂರು, (www.bengaluruwire.com) :
ರಾಜ್ಯಾದ್ಯಂತ ಏಕ ಕಾಲಕ್ಕೆ 15 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮತ್ತಿತರ 68 ಸ್ಥಳಗಳ ಮೇಲೆ ದಾಳಿ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳದ 503 ಅಧಿಕಾರಿಗಳು ಈ ಭ್ರಷ್ಟ ಅಧಿಕಾರಿಗಳ ಬಳಿ ಬಲ್ಲ ಮೂಲಗಳಿಗಿಂತ ಶೇ.77 ರಿಂದ ಬರೋಬ್ಬರಿ ಶೇ.879 ಹೆಚ್ಚಿನ ಅಕ್ರಮ ಆಸ್ತಿಗಳನ್ನು ಈವರೆಗಿನ ತನಿಖೆಯಿಂದ ಪತ್ತೆ ಹಚ್ಚಿದ್ದಾರೆ.
ಚಿನ್ನ- ಬೆಳ್ಳಿ ಒಡವೆ, ನಗದು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ ಇತ್ಯಾದಿಗಳನ್ನು ಈ 15 ಪರಮ ಭ್ರಷ್ಟ ಅಧಿಕಾರಿಗಳಲ್ಲಿ ತಮ್ಮ ಬಲ್ಲ ಆದಾಯ ಮೂಲಕ್ಕಿಂತ ಶೇ.77 ರಿಂದ 200 ರಷ್ಟು ಅಕ್ರಮ ಆಸ್ತಿ ಹೊಂದಿದ ಹತ್ತು ಅಧಿಕಾರಿಗಳಿದ್ದಾರೆ. ಇನ್ನು ಶೇ.200 ರಿಂದ ಶೇ.300 ರಿಂದ ಶೇ.400 ರ ಒಳಗೆ ಹೆಚ್ಚಿನ ಅಕ್ರಮ ಆಸ್ತಿ ಹೊಂದಿದ ಓರ್ವ ಅಧಿಕಾರಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ.
ತಮ್ಮ ಬಲ್ಲ ಆದಾಯಕ್ಕಿಂತ ಶೇ.400 ಕ್ಕೂ ಅಧಿಕವಾಗಿ ಅಡ್ಡದಾರಿಯಲ್ಲಿ ಹಣ ಮಾಡಿದ ನಾಲ್ವರು ಅಧಿಕಾರಿಗಳಿರುವುದನ್ನು ತನಿಖೆಯಿಂದ ಪತ್ತೆ ಹಚ್ಚಿದ್ದಾರೆ. ಅದರ ವಿವರ ಈ ಕೆಳಕಂಡಂತಿದೆ :
1. ಎಸ್ ಎಂ ,ಬಿರಾದಾರ್, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ , ಜೇವರ್ಗಿ , ಕಲಬುರಗಿ ಜಿಲ್ಲೆ
• 4,15,12,491 ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆ.
• ಶೇ. 406.17 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಪತ್ತೆ.
2. ಟಿ .ಎಸ್ . ರುದ್ರೇಶಪ್ಪ , ಜಂಟಿ ನಿರ್ದೇಶಕ , ಕೃಷಿ ಇಲಾಖೆ , ಗದಗ ಜಿಲ್ಲೆ , ಗದಗ
• 6,65,03,782 ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆ.
• ಶೇ. 400 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಪತ್ತೆ.
3. ಶ್ರೀನಿವಾಸ್.ಕೆ, ಕಾರ್ಯಪಾಲಕ ಅಭಿಯಂತರರು , ಹೆಚ್‌ಎಲ್‌ಸಿ -3 , ಮಂಡ್ಯ
• 3,10,20,826 ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆ.
• ಶೇ. 179.37 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಪತ್ತೆ.
4. ಕೆ .ಎಸ್.ಲಿಂಗೇಗೌಡ , ಕಾರ್ಯಪಾಲಕ ಅಭಿಯಂತರರು , ಸ್ಮಾರ್ಟ್ ಸಿಟಿ , ಮಂಗಳೂರು ಮಹಾನಗರ ಪಾಲಿಕೆ
• 2,03,94,135 ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆ.
• ಶೇ. 146.33 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಪತ್ತೆ.
5. ಎಲ್. ಸಿ. ನಾಗರಾಜ್ , ಆಡಳಿತಾಧಿಕಾರಿ , ಸಕಾಲ ಮಷನ್, ಬೆಂಗಳೂರು ನಗರ
• 10,82,07,660 ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆ.
• ಶೇ . 198 % ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಪತ್ತೆ.
6. ಜಿ.ವಿ. ಗಿರಿ , ಗ್ರೂಪ್ – ಡಿ ನೌಕರ , ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್, ಮಾರಪ್ಪನಪಾಳ್ಯ , ಯಶವಂತಪುರ , ಬೆಂಗಳೂರು ನಗರ
• 6,24,03,000 ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆ.
• ಶೇ . 563.85 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಪತ್ತೆ.
7. ಎಸ್. ಎಸ್. ರಾಜಶೇಖರ್, ಫಿಸಿಯೋಥೆರಪಿಸ್ಟ್, ಸರ್ಕಾರಿ ಆಸ್ಪತ್ರೆ, ಯಲಹಂಕ
• 1, 40,64,000 ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆ.
• ಶೇ. 77 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಪತ್ತೆ.
8. ಮಾಯಣ್ಣ, ಪ್ರಥಮ ದರ್ಜೆ ಸಹಾಯಕ, ಬಿಬಿಎಂಪಿ ಕೇಂದ್ರ ಕಛೇರಿ, ಬೆಂಗಳೂರು ನಗರ
• 4,92,35,000 ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆ.
• ಶೇ. 138 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಗಳಿಕೆ ಪತ್ತೆ.
9. ಕೆ. ಎಸ್. ಶಿವಾನಂದ್, ಸಬ್-ರಿಜಿಸ್ಟ್ರಾರ್ (ನಿವೃತ್ತ), ಬಳ್ಳಾರಿ ಜಿಲ್ಲೆ.
1,37,40,835 ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆ.
• ಶೇ. 198 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಪತ್ತೆ.
10. ಸದಾಶಿವರಾಯಪ್ಪ ಮರಲಿಂಗಣ್ಣನವರ್, ಹಿರಿಯ ಮೋಟಾರ್ ನಿರೀಕ್ಷಕ , ಗೋಖಾಕ್
• 3.50 ಕೋಟಿ ರೂ. ಆಸ್ತಿಪಾಸ್ತಿ ಪತ್ತೆ.
• ಶೇ. 190.81 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಪತ್ತೆ.
11. ಅಡವಿ ಸಿದ್ದೇಶ್ವರ ಕಾರೆಪ್ಪ ಮಾಸ್ತಿ , ಸಹಕಾರಿ ಇಲಾಖೆ ಬೆಳಗಾವಿ
• 1.74 ಕೋಟಿ ರೂ. ಮೌಲ್ಯ ಆಸ್ತಿಪಾಸ್ತಿ ಪತ್ತೆ.
• ಶೇ. 191.91 % ನಷ್ಟು ಅಕ್ರಮ ಆಸ್ತಿ ಪತ್ತೆ.
12. ನಾತಾಜಿ ಪಿರಾಜಿ ಪಾಟೀಲ್ , ಹೆಸ್ಕಾಂ , ಬೆಳಗಾವಿ
• 2.20 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ಪತ್ತೆ.
• ಶೇ. 141.30 ರಷ್ಟು ಅಕ್ರಮ ಆಸ್ತಿ ಪತ್ತೆ.
13. ಲಕ್ಷ್ಮಿ ನರಸಿಂಹಯ್ಯ , ಆರ್ ಐ , ದೊಡ್ಡಬಳ್ಳಾಪುರ
• 1.83 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ.
• ಶೇ. 141 ರಷ್ಟು ಅಕ್ರಮ ಆಸ್ತಿ ಪತ್ತೆ.
14. ವಾಸುದೇವ್ , ಮಾಜಿ ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ಬೆಂಗಳೂರು ಗ್ರಾಮಾಂತರ
• 18.20 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ಪತ್ತೆ.
• ಶೇ. 879.53 ರಷ್ಟು ಅಕ್ರಮ ಆಸ್ತಿ ಪತ್ತೆ.
15. ಬಿ.ಕೃಷ್ಣಾರೆಡ್ಡಿ, ಪ್ರಧಾನ ವ್ಯವಸ್ಥಾಪಕ ನಿರ್ದೇಶಕ, ಕೆ ಎಂ ಎಫ್, ಬೆಂಗಳೂರು
• 4.82 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆ.
• ಶೇ.305 ರಷ್ಟು ಅಕ್ರಮ ಆದಾಯ ಪತ್ತೆ.
ಮೇಲ್ಕಂಡ 15 ಆರೋಪಿತ ಅಧಿಕಾರಿಗಳ ಚರ-ಸ್ಥಿರ ಆಸ್ತಿಗಳ ವಿವರವು ಅವರ ವಿವರಣೆ ಹಾಗೂ ತನಿಖೆ ಮೇಲೆ ಅವಲಂಬಿತವಾಗಿದ್ದು, ಈ ಭ್ರಷ್ಟ ಅಧಿಕಾರಿಗಳ ಆಸ್ತಿ- ಪಾಸ್ತಿ, ಚಿನ್ನಾಭರಣ, ಬ್ಯಾಂಕ್ ಠೇವಣಿ, ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ ಎಂದು ಎಸಿಬಿ ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.