ಬೆಂಗಳೂರು, (www.bengaluruwire.com) : ಮಹಿಳೆಯೊಬ್ಬರು ಹೆಬ್ಬಾಳದ ಎಸ್ಟೀಮ್ ಮಾಲ್ ಬಸ್ ಸ್ಟಾಪ್ ನಲ್ಲಿ 6.31 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತಿತರ ವಸ್ತುಗಳಿದ್ದ ಬ್ಯಾಗನ್ನು ಕಳೆದುಕೊಂಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಬ್ಬಂದಿ ಸಂಸ್ಥೆಯ ಅಧಿಕಾರಿಗಳ ಮೂಲಕ ಬ್ಯಾಗನ್ನು ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮತ್ತು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ರಾಜೇಶ್ವರಿ ಎಂಬುವರು ಸೋಮವಾರ ಬೆಳಗ್ಗೆ ಈಸ್ಟರ್ನ್ ಮಾಲ್ ಬಳಿಯ ಬಸ್ ಸ್ಟಾಪ್ ನಲ್ಲಿ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಕಳೆದು ಕೊಂಡಿದ್ದರು. ಇದೇ ಬ್ಯಾಗ್ ಬಿಎಂಟಿಸಿ ಸಂಚಾರಿ ನಿಯಂತ್ರಕರಾದ ಪ್ರಕಾಶ್ ಹಾಗೂ ಶಮೀಸಾಬ್ ಕೈಗೆ ಸಿಕ್ಕಿದ್ದು, ಕೂಡಲೇ ಅದನ್ನು ಬಿಎಂಟಿಸಿ ಮ್ಯಾನೇಜರ್ ಗೆ ಸಂಬಂಧಿಸಿದವರಿಗೆ ಹಿಂತಿರುಗಿಸಲು ತಿಳಿಸಿದ್ದರು.
ಬಿಎಂಟಿಸಿ ಅಧಿಕಾರಿಗಳು ಅದರ ಮಾಲೀಕರನ್ನು ಪತ್ತೆ ಹಚ್ಚಿ ಬ್ಯಾಗನ್ನು ಅದರ ಮಾಲೀಕರಿಗೆ ಮರಳಿಸಿದ್ದಾರೆ.
ಆ ಬ್ಯಾಗ್ ನಲ್ಲಿ ಒಂದು ಚಿನ್ನದ ಮಾಂಗಲ್ಯ ಸರ, ಎರಡು ಚಿನ್ನದ ಚೈನ್, ನಾಲ್ಕು ಚಿನ್ನದ ಬಳೆ, ಎರಡು ಕಿವಿಯೋಲೆ, ಮೂರು ಉಂಗುರ , ಒಂದು ಮೊಬೈಲ್ ಫೋನ್ ಹಾಗೂ ಒಂದು ಸಾವಿರ ರೂ. ನಗದು ಹಣವಿತ್ತು.
ಬಿಎಂಟಿಸಿ ಸಿಬ್ಬಂದಿಯ ಈ ಪ್ರಾಮಾಣಿಕತೆ ಹಾಗೂ ಕರ್ತವ್ಯ ಪ್ರಜ್ಞೆಗೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಬ್ಯಾಗ್ ಕಳೆದುಕೊಂಡ ಮಹಿಳೆಯ ಪತಿ ಮಧುಸೂದನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.