ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಶನಿವಾರ ಆಚರಿಸಿದ ಸ್ವಚ್ಛ ಅಮೃತ ಮಹೋತ್ಸವ – 2021 ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ್ ಮಿಷನ್ (ನಗರ) ಅಡಿಯಲ್ಲಿ ನಡೆಸಲಾದ ಸ್ವಚ್ಛ ಸರ್ವೇಕ್ಷಣ್ 2021 (40 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ವರ್ಗ) ರಲ್ಲಿ “ಫಾಸ್ಟೆಸ್ಟ್ ಮೂವರ್” Fastest Mover) ಮೆಗಾ ಸಿಟಿ ಅಡಿಯಲ್ಲಿ ಮೊದಲನೇ ಸ್ಥಾನಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ “ಸ್ವಚ್ಛ ನಗರ ಪ್ರಶಸ್ತಿ” ನೀಡಲಾಯಿತು.
ಭಾರತದ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿಗಳಾದ ದುರ್ಗಾ ಶಂಕರ್ ಮಿಶ್ರಾ ರವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪರವಾಗಿ ಹಾಜರಿದ್ದ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ರವರಿಗೆ “ಸ್ವಚ್ಛ ನಗರ ಪ್ರಶಸ್ತಿ” (Swacch City Award) ಅನ್ನು ಪ್ರಧಾನ ಮಾಡಿದರು. ವೇದಿಕೆಯಲ್ಲಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ. ಹರೀಶ್ ಕುಮಾರ್ ಮತ್ತು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ಉಪಸ್ಥಿತರಿದ್ದರು.