ಬೆಂಗಳೂರು, (www.bengaluruwire.com) : ರಾಜ್ಯ ಒಕ್ಕಲಿಗರ ಸಂಘದಲ್ಲಿ ಡಿ.12 ರಂದು ನಡೆಯುವ ಕಾರ್ಯಕಾರಿ ಸಮಿತಿ ಚುನಾವಣೆಗೆ ಪ್ರೊ.ಎಂ.ನಾಗರಾಜ್ ಹಾಗೂ ಅವರ ತಂಡದವರು ಬುಧವಾರ ನಾಮಪತ್ರ ಸಲ್ಲಿಸಿದರು.
ಒಕ್ಕಲಿಗರ ಸಂಘದ ಅವರಣದಲ್ಲಿರುವ ನಾಡಪ್ರಭು ಕೆಂಪೇಗೌಡರಿಗೆ ಮಾಲಾರ್ಪಣೆ ಮಾಡಿ , ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಪ್ರೊ.ನಾಗರಾಜ್, ಒಕ್ಕಲಿಗರ ಸಮುದಾಯ ಸಂಘಟನೆ ನಮ್ಮ ಮುಖ್ಯ ಗುರಿ. ಆಡಳಿತದಲ್ಲಿ ಶುಭ್ರ, ಭ್ರಷ್ಟಚಾರ ಮುಕ್ತ ಪಾರದರ್ಶಕ ಆಡಳಿತಕ್ಕೆ ಬದ್ದರಾಗಿ ಕಾರ್ಯ ನಿರ್ವಹಿಸುವ ಸಲುವಾಗಿ ನಮ್ಮ ತಂಡ ಕಾರ್ಯಕಾರಿ ಸಮಿತಿಗೆ ಚುನಾವಣೆಗೆ ನಿಂತಿದೆ. ಒಕ್ಕಲಿಗರ ಬಾಂಧವರು ನಮ್ಮ ಪರ ಇದ್ದಾರೆ. ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಬಿಬಿಎಂಪಿಯ ನಿವೃತ್ತ ಚೀಫ್ ಎಂಜಿನಿಯರ್ ಕೆ.ಟಿ.ನಾಗರಾಜ್ ಮಾತನಾಡಿ, 100ವರ್ಷಗಳ ಇತಿಹಾಸವಿರುವ ರಾಜ್ಯ ಒಕ್ಕಲಿಗರ ಸಂಘಕ್ಕೆ ಹಲವಾರು ಮಹನೀಯರುಗಳು ಸಮುದಾಯದ ಅಭಿವೃದ್ದಿ ಶ್ರಮಿಸಿದ್ದಾರೆ. ಕಳೆದ 30ವರ್ಷಗಳ ಕಾಲ ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸಿದ್ದೇನೆ. ನಮ್ಮ ಒಕ್ಕಲಿಗರ ಸಮುದಾಯ ಸಶಕ್ತಗೊಳಿಸಲು ಶ್ರಮವಹಿಸುವುದಾಗಿ ಎಂದು ಹೇಳಿದರು.
ಹೆಚ್.ವಿ.ಅಶ್ವತ್, ಮಾತನಾಡಿ ಕಳೆದ ಬಾರಿ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಸಮುದಾಯದ ಸಂಘಟನೆ, ಶಿಕ್ಷಣದ ಬಗ್ಗೆ ಅತಿ ಹೆಚ್ಚು ಸಮಯ ಸಕ್ರಿಯವಾಗಿ ದುಡಿದಿದ್ದೇನೆ. ನಮ್ಮ ತಂಡದಲ್ಲಿ ಉತ್ತಮ ಅಭ್ಯರ್ಥಿಗಳು, ಚಿಂತಕರು ಇದ್ದಾರೆ. ಒಕ್ಕಲಿಗರ ಸಂಘದ ಆಸ್ತಿಗಳ ರಕ್ಷಣೆ ಮತ್ತು 500 ಜನ ನೌಕರರ ಹುದ್ದೆ ಖಾಯಂ ಮಾಡುವುದು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವುದು ಮತ್ತು ರಾಜ್ಯ ಒಕ್ಕಲಿಗ ಸಮುದಾಯ ಸಂಘಟನೆ ನಮ್ಮ ಗುರಿ ಎಂದು ತಿಳಿಸಿದರು.
ಎಂ.ಎ.ಆನಂದ, ಕೆ.ಕೃಷ್ಣಮೂರ್ತಿ, ಪೂಜಾರಿಪಾಳ್ಯ, ಕೋದಂಡರಾಮ ,ಆರ್.ಎಸ್.ಗೌಡ ,ದಿವ್ಯ ಕೆ ಮೂರ್ತಿ, ಪಿಳ್ಳಪ್ಪ , ಜಿ.ಎಸ್.ಪುಟ್ಟೇಗೌಡ, ಬಿ.ಆರ್.ಬಾಲಕೃಷ್ಣ , ಹೆಚ್.ಡಿ.ಬೆಟ್ಟೇಗೌಡ, ಮುನೇಗೌಡ, ಯೋಗೇಶ್ ಗೌಡ ಹಾಗೂ ಪ್ರೋ.ಸಿದ್ದೇಗೌಡರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಭಾಗಿಯಾಗಿದ್ದರು.