ಬೆಂಗಳೂರು, (www.bengaluruwire.com) :
ಬೆಂಗಳೂರು ಮೆಟ್ರೋ ರೈಲು ನಿಗಮ (Namma Metro) ನ.18 ಗುರುವಾರದಿಂದ ಮೆಟ್ರೋ ರೈಲು ಸೇವೆಯ ಅವಧಿಯನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, ಅದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ (BMTC) ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಮುಖ ಮೆಟ್ರೋ ನಿಲ್ದಾಣಗಳಿಂದ ಮೆಟ್ರೋ ಫೀಡರ್ ಸಾರಿಗೆ ಸೌಲಭ್ಯವನ್ನು ತಡರಾತ್ರಿಯವರೆಗೆ ಒದಗಿಸಲಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ ಸುರಕ್ಷಿತ ಸಾರಿಗೆ ಸೇವೆಯನ್ನು ಮಿತವ್ಯಯ ದರದಲ್ಲಿ ಒದಗಿಸುತ್ತಿದೆ. ಸಂಸ್ಥೆಯು ವಿವಿಧ ಮಾರ್ಗಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸಾರಿಗೆ ಸೇವೆ ನೀಡುತ್ತಿದೆ.
ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಬೇಡಿಕೆಯನ್ನು ಪರಿಶೀಲಿಸಿ ಮೆಟ್ರೋ ಫೀಡರ್ ಸೇವೆಗಳಲ್ಲಿ ಒದಗಿಸಿರುವ ತಡರಾತ್ರಿ ಸೇವೆಗಳಲ್ಲಿ ಅಗತ್ಯ ಬದಲಾವಣೆ ಮಾಡಲಿದೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮೆಟ್ರೊ ಫೀಡರ್ ಮಾರ್ಗದ ವಿವರಗಳು ಕೆಳಕಂಡಂತಿವೆ :

| ಕ್ರ.ಸಂ | ಎಲ್ಲಿಂದ | ಎಲ್ಲಿಗೆ | ಮಾರ್ಗ | ನಿರ್ಗಮನದ ವೇಳೆ |
| 1 | ಎಸ್.ವಿ.ಮೆಟ್ರೊ ನಿಲ್ದಾಣ | ಸೆಂಟ್ರಲ್ ಸಿಲ್ಕ್ ಬೋರ್ಡ್ | ಧೂಪನಹಳ್ಳಿ, ಕೋರಮಂಗಲ, ಮಡಿವಾಳ | ರಾತ್ರಿ 10:30, 11:30, 12:15 |
| 2 | ಎಸ್.ವಿ.ಮೆಟ್ರೊ ನಿಲ್ದಾಣ | ವೈಟ್‌ಪೀಲ್ಡ್ ಟಿಟಿಎಂಸಿ | ಬೈಯ್ಯಪ್ಪನಹಳ್ಳಿ ಮೆಟ್ರೋ ರೈಲು ನಿಲ್ದಾಣ, ಕೆ.ಆರ್.ಪುರಂ ರೈಲು ನಿಲ್ದಾಣ, ಹೂಡಿ | ರಾತ್ರಿ 10:35, 12:10 |
| 3 | ಎಸ್.ವಿ.ಮೆಟ್ರೊ ನಿಲ್ದಾಣ | ಕೆ.ಆರ್.ಪುರಂ | ಬೈಯ್ಯಪ್ಪನಹಳ್ಳಿ ಮೆಟ್ರೋ ರೈಲು ನಿಲ್ದಾಣ, ಟಿನ್ಪ್ಯಾಕ್ಟರಿ | ರಾತ್ರಿ 12:05, |
| 4 | ವಿಜಯನಗರ ಮೆಟ್ರೊ ನಿಲ್ದಾಣ | ಅಂಬೇಡ್ಕರ್ ಕಾಲೇಜು | ಚಂದ್ರಾಲೇಔಟ್, ನಾಗರಬಾವಿ ಸರ್ಕಲ್ | ರಾತ್ರಿ 11:50 |
| 5 | ರಾಜರಾಜೇಶ್ವರಿನಗರ ಮೆಟ್ರೊ ನಿಲ್ದಾಣ | ಬಿಇಎಂಎಲ್ 5ನೇ ಹಂತ | ರಾಜರಾಜೇಶ್ವರಿ ದೇವಸ್ಥಾನ, ಬಿಇಎಂಎಲ್ ಕಾಂಪ್ಲೆಕ್ಸ್ | ರಾತ್ರಿ 10:20, 11:10, 12:05 |
| 6 | ಜ್ಞಾನಭಾರತಿ ಮೆಟ್ರೋ ನಿಲ್ದಾಣ | ಉಲ್ಲಾಳು ಉಪನಗರ | ಬೆಂಗಳೂರು ವಿಶ್ವವಿದ್ಯಾಲಯ ಕ್ವಾರ್ಟರ್ಸ್, ಉಲ್ಲಾಳು | ರಾತ್ರಿ 10:50, 12:05 |
| 7 | ಜಾಲಹಳ್ಳಿ ಮೆಟ್ರೋ ನಿಲ್ದಾಣ | ವಿದ್ಯಾರಣ್ಯಪುರ | ಗಂಗಮ್ಮ ವೃತ್ತ, ಜಾಲಹಳ್ಳಿ ಈಸ್ಟ್, ಎಂ.ಎಸ್.ಪಾಳ್ಯ | ರಾತ್ರಿ 11:05, 12:15 |
| 8 | ಜಾಲಹಳ್ಳಿ ಮೆಟ್ರೋ ನಿಲ್ದಾಣ | ಪೀಣ್ಯ 2ನೇ ಹಂತ | ಟಿವಿಎಸ್ ಕ್ರಾಸ್, ಎನ್‌ಟಿಟಿಎಫ್ | ರಾತ್ರಿ 11:00, 12:10 |
| 9 | ನಾಗಸಂದ್ರ ಮೆಟ್ರೋ ನಿಲ್ದಾಣ | ಚಿಕ್ಕಬಾಣಾವಾರ | ದಾಸರಹಳ್ಳಿ, ಬಗಲುಗುಂಟೆ, ಜನಪ್ರಿಯ ಅಪಾರ್ಟ್ಮೆಂಟ್ | ರಾತ್ರಿ 11:10, 12:05 |
| 10 | ಜಯನಗರ ಮೆಟ್ರೋ ನಿಲ್ದಾಣ | ಜಂಬೂಸವಾರಿ ದಿಣ್ಣೆ, | ಜಯನಗರ 5ನೇ ಬ್ಲಾಕ್, ಪುಟ್ಟೇನಹಳ್ಳಿ, ಕೊತ್ತನೂರು ದಿಣ್ಣೆ | ರಾತ್ರಿ 10:00, 11:10, 12:15 |
| 11 | ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣ | ಕಗ್ಗಲಿಪುರ | ಅಗರ ಗೇಟ್, ಉದಯಪಾಳ್ಯ, | ರಾತ್ರಿ 11:10, 12:10 |






















