ಬೆಂಗಳೂರು, (www.bengaluruwire.com) : ರೈಲ್ವೆ ಸಚಿವಾಲಯವು ಕೋವಿಡ್ ಪೂರ್ವ ಅವಧಿಯ ರೈಲುಗಳ ಸಂಖ್ಯೆ ಮತ್ತು ಹಿಂದಿನಂತೆ ಕಡಿಮೆ ದರದಲ್ಲಿ
ರೈಲುಗಳನ್ನು ಮರು ಸಂಚರಿಸಲು ನಿರ್ಧರಿಸಿದೆ.
ಇದರಿಂದ ಇನ್ನು ಮುಂದೆ ರೈಲುಗಳ ಪ್ರಾರಂಭದ ಸಂಖ್ಯೆಯು ‘0’ (ಸೊನ್ನೆ) ಇರುವುದಿಲ್ಲ. ರೈಲು ಸಂಖ್ಯೆಗಳು ಮೊದಲಿನಂತೆ ‘1’ ಅಥವಾ ‘2’ ಸಂಖ್ಯೆಯಿಂದ ಪ್ರಾರಂಭವಾಗುವುವು. ಆದರೆ ಕೆಲವು ರೈಲುಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರುವುದು.
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುವ ರೈಲುಗಳ ಮಾರ್ಗ ಮತ್ತು ರೈಲಿನ ಸಂಖ್ಯೆ ವಿವರ :
ರೈಲುಗಳು ಕೋವಿಡ್ ಪೂರ್ವ ಅವಧಿಯ ದರ ವಿನ್ಯಾಸ ದೊಂದಿಗೆ (ಕೋವಿಡ್ ಅವಧಿಯಲ್ಲಿ ಅನ್ವಯವಾಗುತ್ತಿದ್ದ ದರಕ್ಕಿಂತ ಕಡಿಮೆ ದರದಲ್ಲಿ) ಸಂಚರಿಸುವುದು.
ಕೋವಿಡ್ -19 ರ ಎಲ್ಲ ನಿರ್ಬಂಧಗಳು ಹಾಗೂ ಮಾರ್ಗಸೂಚಿಗಳು ಮುಂದುವರೆಯುತ್ತದೆ. ಸಂಬಂಧಿತ ತಂತ್ರಾಂಶದಲ್ಲಿ ಅವಶ್ಯಕ ತಾಂತ್ರಿಕ ಮಾರ್ಪಾಡು ಆಗಬೇಕಾದ ಕಾರಣ ಈ ಬದಲಾವಣೆಯು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ.
ನೈಋತ್ಯ ರೈಲ್ವೆಯ ಒಡೆತನದಲ್ಲಿ 102 ರೈಲುಗಳು (68 ರೈಲುಗಳ ಸಂಖ್ಯೆಯು ಬದಲಾಗಲಿದೆ) ಹಾಗೂ ನೈಋತ್ಯ ರೈಲ್ವೆಯಾದ್ಯಂತ 72 ವಿಶೇಷ ರೈಲುಗಳು ( 20 ರೈಲುಗಳ ಸಂಖ್ಯೆಯು ಬದಲಾಗಲಿದೆ) ಹಿಂದಿನಂತೆ ಸಂಚರಿಸಲಿದೆ.