ಬೆಂಗಳೂರು, (www.bengaluruwire.com) :
ಅಪ್ಪ-ಅಮ್ಮನ ಹುಡುಕುತ್ತಾ ಹೋದಿರೆ ಅಪ್ಪು…. ಒಡೆದುಹೋಯಿತು ನಮ್ಮ ಮುತ್ತಿನ ಚಿಪ್ಪು.. ಜೀವ ಬಿಟ್ಟರು ನೀವು ಜೀವಂತ ನಮ್ಮೊಳಗೆ.. ಇಲ್ಲವೆಂದರೂ ಇದ್ದೀರಿ ನಮ್ಮೆಲ್ಲರ ಮನದೊಳಗೆ ಅಪ್ಪು … ಪ್ರೀತಿಯ ಅಪ್ಪು…
ಅಗಲಿದ ನಾಡಿನ ಯುವರತ್ನ, ಬೆಟ್ಟದ ಹೂವಿನ ಒಡೆಯ, ಪುನೀತ್ ರಾಜ್ ಕುಮಾರ್ ಗೆ ನಾಡೋಜ ಬರಗೂರು ರಾಮಚಂದ್ರಪ್ಪ ಸಾಹಿತ್ಯ ಹೊಂದಿದ ಮೇಲಿನ ಗೀತೆಯನ್ನು ರಾಜ್ಯದ ಹೆಮ್ಮೆಯ, ಖ್ಯಾತ ಸಂಗೀತಗಾರರಾದ ಡಾ.ಶಮಿತಾ ಮಲ್ನಾಡ್ ಹಾಡಿನ ಮೂಲಕ ಗಾನ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.
4 ನಿಮಿಷ 32 ಸೆಕೆಂಡುಗಳ ಈ ಹಾಡು ಅಪ್ಪು ಮೇಲಿನ ಪ್ರೀತಿ, ಪುನೀತ್ ತಮ್ಮ ತಂದೆ ಡಾ.ರಾಜ್ ಕುಮಾರ್ ಹಾಗೂ ತಾಯಿ ಪಾರ್ವತಮ್ಮ, ಸಹೋದರರ ದೊಡ್ಡಮನೆಯವರ ಗುಣಗಳನ್ನು ನಾಡೋಜ ಬರಗೂರು ರಾಮಚಂದ್ರಪ್ಪನವರು ಸೊಗಸಾಗಿ ಸಾಹಿತ್ಯ ಬರೆದಿದ್ದರೆ, ಡಾ.ಶರ್ಮಿತ ತಮ್ಮ ಅನುಭವದ ನೆಲೆಯಲ್ಲಿ ಮನ ಮಿಡಿಯುವಂತೆ ಹಾಡಿದ್ದಾರೆ. ಪುನೀತ್ ಅಭಿಮಾನಿಗಳಿಗಾಗಿ ಈ ಹಾಡನ್ನು ಯೂಟ್ಯೂಬ್ (#Youtube) ನಲ್ಲಿ ಮಲ್ನಾಡ್ ಮಿರ್ಚಿ (Malnad Mirchi) ಚಾನಲ್ ಹೆಸರಿನಲ್ಲಿ Upload ಮಾಡಲಾಗಿದೆ.
ಡಾ.ಶಮಿತಾ ಮಲ್ನಾಡ್ ಅವರ ಸುರಾಜಕಾ ಸಂಸ್ಥೆ ನಿರ್ಮಿಸಿದ ಅಪ್ಪು ಮುತ್ತಿನ ಚಿಪ್ಪು… ಈ ಗೀತೆಯನ್ನು ರಾಜಶೇಖರ್ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರೆ, ಶ್ರೀನಿವಾಸ್ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಅರುಣ್ ಅಂಡ್ರೀವ್ ಸಂಗೀತ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.