ಬೆಂಗಳೂರು, (www.bengaluruwire.com) :
ಕರ್ನಾಟಕ ರಾಜ್ಯೋತ್ಸವದ 66ನೇ ವರ್ಷದ ಅಂಗವಾಗಿ ಈ ಬಾರಿ ವಿವಿಧ ಕ್ಷೇತ್ರಗಳ 66 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ( Kannada Rajyotsava Award – 2021 ) ಪಟ್ಟಿಯನ್ನು, ರಾಜ್ಯ ಸರ್ಕಾರ ಪ್ರಕಟಿಸಿದೆ.
ಅಲ್ಲದೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ರಾಷ್ಟ್ರಾದ್ಯಂತ ಅಮೃತ ಮಹೋತ್ಸವ ಆಚರಿಸಲಾಗುತ್ತಿರುವ ಹೊತ್ತಿನಲ್ಲಿಯೇ 10 ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ- 2021 ನೀಡಿ ಗೌರವಿಸುತ್ತಿದೆ. ಈ ವಿಶೇಷ ಪ್ರಶಸ್ತಿಯು ಕೇವಲ ಈ ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ( Kannada and Culture Minister V Sunil Kumar ) ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ಕನ್ನಡದ ಮೇರು ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದಿಂದ ಪ್ರಶಸ್ತಿ ಘೋಷಣೆಯಲ್ಲಿ ವಿಳಂಬವಾಯಿತು. ಅವರ ಅಂತ್ಯಕ್ರಿಯೆಯ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ ನಂತ್ರ, ಈ ಬಾರಿ 24 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 66 ಮಂದಿಗೆ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ( Kannada Rajyotsava Award ) ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸೇವಾಸಿಂಧು ಮೂಲಕ ಸಾರ್ವಜನಿಕರು ಮಾಡಿದ ಶಿಫಾರಸ್ಸುಗಳನ್ನು ಪರಿಶೀಲಿಸಿ, ಎಲೆಮರೆಕಾಯಿಯಂತೆ ಕೆಲಸ ಮಾಡುತ್ತಿರುವ ಸಾಧಕರನ್ನು ಪ್ರಶಸ್ತಿ ಸಲಹಾ ಸಮಿತಿ ಹಾಗೂ ಮುಖ್ಯಮಂತ್ರಿ ಗಳ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿ ಅಳೆದು ತೂಗಿ ಆಯ್ಕೆ ಸಮಿತಿ ಅಂತಿಮಗೊಳಿಸಿದ ಹೆಸರುಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಈ ಕೆಳಕಂಡಂತಿದೆ :
ಸಾಹಿತ್ಯ ಕ್ಷೇತ್ರ
ಮಹಾದೇವ ಶಂಕನಪುರ – ಚಾಮರಾಜನಗರ
ಪ್ರೊ.ಡಿ.ಟಿ.ರಂಗಸ್ವಾಮಿ – ಚಿತ್ರದುರ್ಗ
ಜಯಲಕ್ಷ್ಮೀ ಮಂಗಳಮೂರ್ತಿ – ರಾಯಚೂರು
ಅಜ್ಜಂಪುರ ಮಂಜುನಾಥ್ – ಚಿಕ್ಕಮಗಳೂರು
ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ – ವಿಜಯಪುರ
ಸಿದ್ಧಪ್ಪ ಬಿದರಿ – ಬಾಗಲಕೋಟೆ
ರಂಗಭೂಮಿ ಕ್ಷೇತ್ರ
ಫಕೀರಪ್ಪ ರಾಮಪ್ಪ ಕೊಡಾಯಿ – ಹಾವೇರಿ
ಪ್ರಕಾಶ್ ಬೆಳವಾಡಿ – ಚಿಕ್ಕಮಗಳೂರು
ರಮೇಶ್ ಗೌಡ ಪಾಟೀಲ್ – ಬಳ್ಳಾರಿ
ಮಲ್ಲೇಶಯ್ಯ ಎನ್ – ರಾಮನಗರ
ಸಾವಿತ್ರಿ ಗೌಡರ್ – ಗದಗ
ಜಾನಪದ ಕ್ಷೇತ್ರ
ಆರ್.ಬಿ ನಾಯಕ – ವಿಜಯಪುರ
ಗೌರಮ್ಮ ಹುಚ್ಚಪ್ಪ ಮಾಸ್ತರ್ – ಶಿವಮೊಗ್ಗ
ದುರ್ಗಪ್ಪ ಚೆನ್ನದಾಸರ – ಬಳ್ಳಾರಿ
ಬನ್ನಂಜೆ ಬಾಬು ಅಮೀನ್ – ಉಡುಪಿ
ಮಲ್ಲಿಕಾರ್ಜುನ ರಾಚಪ್ಪ ಮುದಕವಿ – ಬಾಗಲಕೋಟೆ
ವೆಂಕಪ್ಪ ಗೋವಿಂದಪ್ಪ ಭಜಂತ್ರಿ – ಧಾರವಾಡ
ಮಹಾರುದ್ರಪ್ಪ ವೀರಪ್ಪ ಇಟಗಿ – ಹಾವೇರಿ
ಸಂಗೀತ ಕ್ಷೇತ್ರ
ತ್ಯಾಗರಾಜು ಸಿ (ನಾದಸ್ವರ ) – ಕೋಲಾರ
ಹೆರಾಲ್ಡ್ ಸಿರಿಲ್ ಡಿಸೋಜಾ – ದಕ್ಷಿಣ ಕನ್ನಡ
ಶಿಲ್ಪಕಲೆ ಕ್ಷೇತ್ರ
ಡಾ.ಜಿ.ಜ್ಞಾನಾನಂದ – ಚಿಕ್ಕಬಳ್ಳಾಪುರ
ವೆಂಕಣ್ಣ ಚಿತ್ರಾಗಾರ – ಕೊಪ್ಪಳ
ಸಮಾಜ ಸೇವೆ ಕ್ಷೇತ್ರ
ಸೂಲಗಿತ್ತಿ ಯಮುನವ್ವ (ಸಾಲಮಂಟಪಿ ) – ಬಾಗಲಕೋಟೆ
ಮದಲಿ ಮಾದಯ್ಯ – ಮೈಸೂರು
ಮುನಿಯಪ್ಪ ದೊಮ್ಮಲೂರು – ಬೆಂಗಳೂರು ನಗರ
ಬಿಎಲ್ ಪಾಟೀಲ್, ಅಥಣಿ – ಬೆಳಗಾವಿ
ಡಾ.ಜೆ.ಎನ್.ರಾಮಕೃಷ್ಣೇಗೌಡ – ಮಂಡ್ಯ
ವೈದ್ಯಕೀಯ ಕ್ಷೇತ್ರ
ಡಾ.ಸುಲ್ತಾನ್ ಬಿ ಜಗಳೂರು – ದಾವಣಗೆರೆ
ಡಾ.ವ್ಯಾಸ ದೇಶಪಾಂಡೆ (ವೇದವ್ಯಾಸ ) – ಧಾರವಾಡ
ಡಾ.ಎ.ಆರ್.ಪ್ರದೀಪ್ ( ದಂತ ವೈದ್ಯಕೀಯ ) – ಬೆಂಗಳೂರು ನಗರ
ಡಾ.ಸುರೇಶ್ ರಾವ್ – ದಕ್ಷಿಣ ಕನ್ನಡ
ಡಾ.ಸುದರ್ಶನ್ – ಬೆಂಗಳೂರು
ಡಾ.ಶಿವನಗೌಡ ರುದ್ರಗೌಡ ರಾಮನಗೌಡರ್ – ಧಾರವಾಡ
ಕ್ರೀಡಾ ಕ್ಷೇತ್ರ
ರೋಹನ ಬೊಪ್ಪಣ್ಣ – ಕೊಡಗು
ಕೆ.ಗೋಪಿನಾಥ್ ( ವಿಶೇಷ ಚೇತನ ) – ಬೆಂಗಳೂರು ನಗರ
ರೋಹಿತ್ ಕುಮಾರ್ ಕಟೀಲ್ – ಉಡುಪಿ
ಎ ನಾಗರಾಜ್ ( ಕಬ್ಬಡಿ ) – ಬೆಂಗಳೂರು ನಗರ
ಸಿನಿಮಾ ಕ್ಷೇತ್ರ
ದೇವರಾಜ್ – ಬೆಂಗಳೂರು ನಗರ
ಶಿಕ್ಷಣ ಕ್ಷೇತ್ರ
ಸ್ವಾಮಿ ಲಿಂಗಪ್ಪ – ಮೈಸೂರು
ಶ್ರೀಧರ್ ಚಕ್ರವರ್ತಿ – ಧಾರವಾಡ
ಪ್ರೊ.ಪಿ.ವಿ.ಕೃಷ್ಣಭಟ್ – ಶಿವಮೊಗ್ಗ
ಸಂಕೀರ್ಣ ಕ್ಷೇತ್ರ
ಡಾ.ಬಿ.ಅಂಬಣ್ಣ – ವಿಜಯನಗರ
ಕ್ಯಾಪ್ಟನ್ ರಾಜಾರಾವ್ – ಬಳ್ಳಾರಿ
ಗಂಗಾವತಿ ಪ್ರಾಣೇಶ್ – ಕೊಪ್ಪಳ
ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ
ಡಾ.ಹೆಚ್.ಎಸ್.ಸಾವಿತ್ರಿ – ಬೆಂಗಳೂರು ನಗರ
ಪ್ರೊ.ಜಿ.ಯು.ಕುಲ್ಕರ್ಣಿ – ಬೆಂಗಳೂರು
ಕೃಷಿ ಕ್ಷೇತ್ರ
ಡಾ.ಸಿ.ನಾಗರಾಜ್ – ಬೆಂಗಳೂರು ಗ್ರಾಮಾಂತರ
ಗುರುಲಿಂಗಪ್ಪ ಮೇಲ್ದೊಡ್ಡಿ – ಬೀದರ್
ಶಂಕರಪ್ಪ ಅಮ್ಮನಘಟ್ಟ – ತುಮಕೂರು
ಪರಿಸರ ಕ್ಷೇತ್ರ
ಮಹಾದೇವ ವೇಳಿಪಾ – ಉತ್ತರ ಕನ್ನಡ
ಬೈಕಂಪಾಡಿ ರಾಮಚಂದ್ರ – ದಕ್ಷಿಣ ಕನ್ನಡ
ಪತ್ರಿಕೋದ್ಯಮ
ಪಟ್ನಂ ಅನಂತ ಪದ್ಮನಾಭ – ಮೈಸೂರು
ಯು.ಬಿ.ರಾಜಲಕ್ಷ್ಮಿ – ಉಡುಪಿ
ನ್ಯಾಯಾಂಗ ಕ್ಷೇತ್ರ
ಸಿ.ವಿ.ಕೇಶವಮೂರ್ತಿ – ಮೈಸೂರು
ಆಡಳಿತ ಕ್ಷೇತ್ರ
ಹೆಚ್ ಆರ್ ಕಸ್ತೂರಿ ರಂಗನ್ – ಹಾಸನ
ಸೈನಿಕ ಕ್ಷೇತ್ರ
ನವೀನ್ ನಾಗಪ್ಪ – ಹಾವೇರಿ
ಯಕ್ಷಗಾನ ಕ್ಷೇತ್ರ
ಗೋಪಾಲಾಚಾರ್ಯ ( ಗೋಪಾಲ ಆಚಾರ್ಯ ) – ಶಿವಮೊಗ್ಗ
ಹೊರನಾಡು ಕನ್ನಡಿಗ ಕ್ಷೇತ್ರ
ಡಾ.ಸುನೀತಾ ಶೆಟ್ಟಿ -ಮುಂಬೈ
ಚಂದ್ರಶೇರ್ ಪಾಲ್ತಾಡಿ – ಮುಂಬೈ
ಡಾ.ಸಿದ್ದರಾಮೇಶ್ವರ ಕಂಟಿಕರ್ – ಹೊರನಾಡು
ಪ್ರವೀಣ್ ಶೆಟ್ಟಿ – ದುಬೈ
ಪೌರಕಾರ್ಮಿಕ ಕ್ಷೇತ್ರ
ರತ್ನಮ್ಮ ಶಿವಪ್ಪ ಬಬಲಾದ – ಯಾದಗಿರಿ
ಹೈದರಾಬಾದ್-ಕರ್ನಾಟಕ ಏಕೀಕರಣ ಹೋರಾಟಗಾರರು
ಮಹದೇವಪ್ಪ ಕಡೆಚೂರು – ಕಲಬುರ್ಗಿ
ಯೋಗ ಕ್ಷೇತ್ರ
ಭ.ಮ.ಶ್ರೀಕಂಠ – ಶಿವಮೊಗ್ಗ
ಡಾ.ರಾಘವೇಂದ್ರ ಶಣೈ – ಬೆಂಗಳೂರು
ಉದ್ಯಮ ಕ್ಷೇತ್ರ
ಶ್ಯಾಮರಾಜು – ಬೆಂಗಳೂರು