ಕನ್ನಡ ನಾಡಿನ ಯುವರತ್ನ, ಚಿತ್ರರಂಗದ ನಟಸಾರ್ವಭೌಮ, ನಮ್ಮೆಲ್ಲರ ಪ್ರೀತಿಯ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ನಾಡಿಗೆ ನಿಜಕ್ಕೂ ತುಂಬಲಾರದ ನಷ್ಟ.
ಕೋಟ್ಯಂತರ ಅಭಿಮಾನಿಗಳ ಅಪ್ಪು ಸದಾ ಕಾಲ ಅರಸನಾಗಿ ಮೆರೆಯಲಿ. ಅಕಾಲಿಕ ಮರಣಕ್ಕೆ ತುತ್ತಾದ ದೊಡ್ಮನೆ ಹುಡುಗನನ್ನು ಸ್ಮರಿಸಲು ಫಿಡಿಲಿಟಸ್ ಗ್ಯಾಲರಿಯ ಚಿತ್ರಕಲಾವಿದ ಕೋಟೆಗದ್ದೆ ರವಿ ಅವರ ಕುಂಚದಿಂದ ಅರಳಿದ ಸ್ಪೀಡ್ ಪೇಂಟಿಂಗ್ ರಚಿಸಿದ್ದಾರೆ. ಆ ಮೂಲಕ ದಿವಂಗತರಿಗೆ ಆ ಕಲಾವಿದ ತಮ್ಮ ಗೌರವ ಮತ್ತು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ದಿವಂಗತರ ಕುಟುಂಬಕ್ಕೆ ಮತ್ತು ಅವರ ಕೋಟ್ಯಂತರ ಅಭಿಮಾನಿಗಳಿಗೆ, ಆ ದೇವರು ಅಪ್ಪು ಇಲ್ಲದಿರುವ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಫಿಡಿಲಿಟಸ್ ಗ್ಯಾಲರಿ ಪ್ರಾರ್ಥಿಸುವುದಾಗಿ ತಿಳಿಸಿದೆ.





















