ದೇಶದಲ್ಲಿ ಕರೋನಾ ಸೋಂಕಿನ ಹೋರಾಟದಲ್ಲಿ 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮ ಆಚರಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಸಾಂಕೇತಿಕವಾಗಿ ತ್ರಿವರ್ಣ ಧ್ವಜ ಹೋಲುವ ಬಲೂನ್ ಗಳನ್ನು ಗುರುವಾರ ಹಾರಿಬಿಡಲಾಯಿತು. ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸಿ ವೈದ್ಯರು, ದಾದಿಯರು ಪರಸ್ಪರ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ.ಜಯಂತಿ, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಮೇಶ್, ಪ್ರಧಾನಮಂತ್ರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಗಿರೀಶ್, ವಾಣಿವಿಲಾಸ ಆಸ್ಪತ್ರೆಯ ಡಾ.ಗೀತಾ, ಮಿಂಟೋ ಆಸ್ಪತ್ರೆಯ ಡಾ.ಸುಜಾತಾ ಹಾಗೂ ಟ್ರಾಮಾ ಕೇಂದ್ರದ ಡಾ.ದಿಲೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಿಕ್ಟೊರಿಯಾ ಹಾಗೂ ವಾಣಿವಿಲಾಸ ಆಸ್ಪತ್ರೆ ಒಂದು ಲಕ್ಷದ ತನಕ ಕರೋನಾ ಲಸಿಕೆಯನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.