ನವದೆಹಲಿ, (www.bengaluruwire.com) : ಭಾರತವು 100 ಕೋಟಿ ಲಸಿಕೆ ಮೈಲುಗಲ್ಲು ಸಾಧಿಸಲು ಶ್ರಮಿಸಿದ ವೈದ್ಯರು, ದಾದಿಯರು ಮತ್ತು ಈ ಸಾಧನೆಯ ಹಿಂದಿರುವ ಎಲ್ಲರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ,
“ಭಾರತವು ಹೊಸ ಚರಿತ್ರೆಯನ್ನು ಸೃಷ್ಟಿಸಿದೆ. ಭಾರತೀಯ ವಿಜ್ಞಾನ, ಉದ್ಯಮ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ ಸ್ಫೂರ್ತಿಯ ವಿಜಯಕ್ಕೆ ನಾವು ಸಾಕ್ಷಿಯಾಗಿದ್ದೇವೆ.
100 ಕೋಟಿ ಲಸಿಕೆ ಮೈಲುಗಲ್ಲು ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಮತ್ತು ಈ ಸಾಧನೆಮಾಡಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು. #VaccineCentury” ಎಂದಿದ್ದಾರೆ.
ಈ ಮಹತ್ವದ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರೂ ಸಹ ದೇಶವನ್ನು ಅಭಿನಂದಿಸಿದ್ದಾರೆ.
‘ಒಂದು ಶತಕೋಟಿʼ ಲಸಿಕೆಗಳ ಮೈಲಿಗಲ್ಲು :
ಕಳೆದ 24 ಗಂಟೆಗಳಲ್ಲಿ 18,454 ಹೊಸ ಪ್ರಕರಣಗಳು ದಾಖಲಾಗಿವೆ. ಚೇತರಿಕೆ ದರ ಪ್ರಸ್ತುತ 98.15% ರಷ್ಟಿದೆ; ಇದು ಮಾರ್ಚ್ 2020ರ ನಂತರ ಗರಿಷ್ಠವಾಗಿದೆ. ಕಳೆದ 24 ಗಂಟೆಗಳಲ್ಲಿ 17,561 ಚೇತರಿಕೆಗಳೊಂದಿಗೆ ಒಟ್ಟು ಚೇತರಿಕೆ ಪ್ರಮಾಣ 3,34,95,808ಕ್ಕೆ ಏರಿಕೆಯಾಗಿದೆ
ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1% ಕ್ಕಿಂತ ಕಡಿಮೆ ಇದ್ದು, ಪ್ರಸ್ತುತ 0.52% ರಷ್ಟಿದೆ; ಮಾರ್ಚ್ 2020ರ ಬಳಿಕ ಇದು ಅತ್ಯಂತ ಕನಿಷ್ಠವೆನಿಸಿದೆ. ಭಾರತದ ಸಕ್ರಿಯ ಪ್ರಕರಣಗಳ ಹೊರೆ 1,78,831 ರಷ್ಟಿದೆ.
ವಾರದ ಪಾಸಿಟಿವಿಟಿ ದರ (1.34%) ಕಳೆದ 118 ದಿನಗಳಿಂದ 3% ಕ್ಕಿಂತ ಕಡಿಮೆ ಇದೆ. ದೈನಂದಿನ ಪಾಸಿಟಿವಿಟಿ ದರ (1.48%) ಕಳೆದ 52 ದಿನಗಳಿಂದ 3% ಕ್ಕಿಂತ ಕಡಿಮೆ ಇದೆ. ಇದುವರೆಗೆ ಒಟ್ಟು 59.57 ಕೋಟಿ ಕರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ.