ಮರದ ಕೊಂಬೆ ಬಿದ್ದು ಸಾವನ್ನಪ್ಪಿದ ತಿಲಕ್ ನಗರ ನಿವಾಸಿ ಸಿದ್ದಪ್ಪ ಅವರ ಕುಟುಂಬಕ್ಕೆ ಬಿಬಿಎಂಪಿ ಅಧಿಕಾರಿ ನೌಕರರ ಸಂಘದ ಮೂಲಕ ಒಂದು ಲಕ್ಷ ರೂ. ಚೆಕ್ಕನ್ನು ಪಾಲಿಕೆ ಆಡಳಿತ ಇಲಾಖೆಯ ವಿಶೇಷ ಆಯುಕ್ತ ದಯಾನಂದ್ ಮಂಗಳವಾರ ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಮೃತ್ ರಾಜ್, ಸಂಘದ ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಸಂತೋಷ್ ಕುಮಾರ್ ನಾಯಕ್, ಕೆ.ಮಂಜೇಗೌಡ, ನಲ್ಲಪ್ಪ, ಸಾಮಾಜಿಕ ಕಾರ್ಯಕರ್ತ ಅಮರೇಶ್ ಮತ್ತಿತರರು ಉಪಸ್ಥಿತರಿದ್ದರು.