ಬೆಂಗಳೂರು, ಆ.31(www.bengaluruwire.com) : ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಅಗತ್ಯವಾದ ಮಹದಾಯಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರೈತಸೇನಾ ಕರ್ನಾಟಕ ಮಹದಾಯಿ ಹೋರಾಟ ಸಮಿತಿ ರಾಜ್ಯಪಾಲ ಥಾವರ್ ಗೆಹಲೋತ್ ಮಂಗಳವಾರ ಅವರನ್ನು ಭೇಟಿಯಾಗಿ ಒತ್ತಾಯಿಸಿದೆ.
ಮಹದಾಯಿ ಯೋಜನೆಯ ಕಾಮಗಾರಿಗೆ ಕೇಂದ್ರ ಸರ್ಕಾರ ಜೂನ್ 2020ರಲ್ಲೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದರೂ ರಾಜ್ಯ ಸರ್ಕಾರ ಈತನ ಮಹಾದಾಯಿ ನ್ಯಾಯಾಧಿಕರಣ ನೀಡಿದ ತೀರ್ಪಿನಂತೆ 13.5 ಟಿಎಂಸಿ ನೀರಿನ ಸದ್ಬಳಕೆ ಮಾಡಿಕೊಳ್ಳದೆ ವಿಳಂಬ ಧೋರಣೆ ನಡೆಸುತ್ತಿರುವ ಬಗ್ಗೆ ರೈತಸೇನೆ ಆಕ್ಷೇಪ ವ್ಯಕ್ತಪಡಿಸಿತು.
ಮಹಾದಾಯಿ ನೀರಿನ ಹೋರಾಟ ಸಂದರ್ಭದಲ್ಲಿ ಪ್ರಾಣತೆತ್ತ 11 ಕುಟುಂಬಗಳ ಪೈಕಿ ಕೇವಲ 3 ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ನೀಡಿದ ಕಾರಣ ಆ ಕುಟುಂಬಗಳು ಸಂಕಷ್ಟದಲ್ಲಿ ಕೈತೊಳೆಯುತ್ತಿದ್ದು ಶೀಘ್ರವೇ ಆ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ರಾಜ್ಯಪಾಲರನ್ನು ನಿಯೋಗವು ಕೋರಿತು.
ರೈತಸೇನಾ ಕರ್ನಾಟಕ ಮಹದಾಯಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ವೀರೇಶ ಸೊರಬದಮಠ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ 11 ತಾಲೂಕುಗಳ ರೈತರ ಬಹುದಿನದ ಬೇಡಿಕೆ ಈಡೇರಿಸುವಂತೆ ಕೋರಿತು.
ಇದಲ್ಲದೆ ರೈತರ ನಿಯೋಗ, ರೈತರು ಬೆಳೆದ ಬೆಳೆಗಳಿಗೆ ಕೇಂದ್ರಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರವೂ ಬೆಂಬಲ ನೀಡಬೇಕು ಹಾಗೂ ಶಾಶ್ವತ ಕೇಂದ್ರ ಸ್ಥಾಪಸಬೇಕು ಎಂದು ನಿಯೋಗ ರಾಜ್ಯಪಾರನ್ನು ಕೋರಿತು.
ಇದೇ ಸಂದರ್ಭದಲ್ಲಿ ರೈತರ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹಲೋಥ್ ಅವರನ್ನು ಸನ್ಮಾನಿಸಿ, ತಮ್ಮ ಮನವಿಪತ್ರವನ್ನು ನೀಡಿತು.
ರೈತರ ನಿಯೋಗದಲ್ಲಿ ಮಲ್ಲಿಕಾರ್ಜುನ ಆಲೇಕರ್, ಗುರುರಾಯನಗೌಡ್ರ, ಶಿದ್ದಲಿಂಗೇಶ ಪಾಟೀಲ್, ದೇವೇಂದ್ರಪ್ಪ ದ್ಯಾಪಲಿಸಿ ಹಾಗೂ ಮತ್ತಿತರ ರೈತ ಮುಖಂಡರು ಉಪಸ್ಥಿತರಿದ್ದರು.