ಬೆಂಗಳೂರು, (www.bengaluruwire.com) : ಜಮೀನುವೊಂದರ ಸರ್ವೇ ಬೌಂಡರಿ ಪಿಕ್ಸ್ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟ ಸಹಾಯಕ ಭೂದಾಖಲೆಗಳ ನಿರ್ದೇಶಕ (ಎಡಿಎಲ್ ಆರ್ ) ರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ದಾಳಿ ನಡೆಸಿದ್ದಾರೆ.
ಯಲಹಂಕ ತಾಲ್ಲೂಕು ಎಡಿಎಲ್ಆರ್ ಆನಂದ್ ಕುಮಾರ್ ಮನೆ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ಯಲಹಂಕ ತಾಲ್ಲೂಕು ಕುದುರುಗೆರೆ ಗ್ರಾಮದ 145, 146 ಸಂಖ್ಯೆಯ ಜಮೀನಿನ ಸರ್ವೇ ಕಾರ್ಯ ನಡೆಸಿ ನಶಿಸಿ ಹೋಗಿರುವ ಭೂದಾಖಲೆಗಳ ಟಿಪ್ಪಣಿ ಪುನರ್ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿಗಳಿಂದ ಹೈಕೋರ್ಟ್ ಆದೇಶದ ಪಾಲನೆ ಮಾಡುವಂತೆ ಇದೇ ಆಗಸ್ಟ್ 8ರಂದು ಆದೇಶಿಸಿದ್ದರು.
ಆದರೆ ಎಡಿಎಲ್ ಆರ್ ಆನಂದ ಕುಮಾರ್ ಜಮೀನಿನ ಮಾಲೀಕರಿಂದ 70 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ
ಮುಂಗಡವಾಗಿ 20 ಲಕ್ಷ ಹಣ ಹಾಗೂ ಚೆಕ್ ಗಳನ್ನ ಪಡೆದಿದ್ದರು.
ಈ ಹಿನ್ನಲೆಯಲ್ಲಿ ಎಸಿಬಿ ಪೊಲೀಸ್ ಅಧಿಕಾರಿಗಳು ಆನಂದ್ ಕುಮಾರ್, ಹಣ ಪಡೆದಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದೂರು ದಾಖಲಿಸಿದ್ದರು. ನಿನ್ನೆ ತಡರಾತ್ರಿ ಜಾಲಹಳ್ಳಿ ಬಳಿ ಇರುವ ಆನಂದ್ ಕುಮಾರ್ ಮನೆ, ಸರ್ವೆ ಇಲಾಖೆಯ ಗುತ್ತಿಗೆ ನೌಕರ ರಮೇಶ್ ಮನೆ, ಡಿಡಿಎಲ್ ಆರ್ ಕುಸುಮಲತಾ ಅವರ ನಿವಾಸ ಹಾಗೂ ಸರ್ವೇಯರ್ ಶ್ರೀನಿವಾಸ ಆಚಾರ್ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿ ಸೂಕ್ತ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಎಸಿಬಿ ದಾಳಿ ವೇಳೆ 25.30 ಲಕ್ಷ ನಗದು ಹಾಗೂ 70 ಲಕ್ಷಗಳ ಮೂರು ಚೆಕ್ ಗಳು ಮನೆಯಲ್ಲಿ ಪತ್ತೆಯಾಗಿದ್ದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಎಡಿಎಲ್ ಆರ್ ಆನಂದ್ ಕುಮಾರ್ ಹಾಗೂ ಗುತ್ತಿಗೆ ನೌಕರ ರಮೇಶ್ ಅವರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.