ಚಿಕ್ಕಬಳ್ಳಾಪುರ, (www.bengaluruwire.com) : ತಾಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಇಡೀ ಸುರಿದ ಧಾರಾಕಾರ ಮಳೆಗೆ ಇತಿಹಾಸ ಪ್ರಸಿದ್ಧ ನಂದಿಬೆಟ್ಟದ ಗುಡ್ಡ ಕುಸಿದು ರಸ್ತೆ ಬಂದ್ ಆಗಿರುವ ಘಟನೆ ನಡೆದಿದೆ.
ಬೆಟ್ಟದ ಮೇಲಿನ ಭಾಗದಿಂದ ಭಾರಿ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಬೆಟ್ಟದ ಕೆಳಗೆ ಇರುವ
ರಂಗಪ್ಪ ವೃತ್ತದ ಬಳಿ ಗುಡ್ಡ ಕುಸಿದು ಗಿರಿಧಾಮದ ರಸ್ತೆ ಬಂದ್ ಆಗಿದೆ.
ಹೀಗಾಗಿ ನಂದಿ ಬೆಟ್ಟಕ್ಕೆ ಬರುತ್ತಿರುವ ಪ್ರವಾಸಿಗರನ್ನು ಪೊಲೀಸರು ಚೆಕ್ ಪೋಸ್ಟ್ ಬಳಿ ತಡೆದು ವಾಪಸ್ ಕಳಿಸುತ್ತಿದ್ದಾರೆ. ಇದರಿಂದ ನಂದಿಬೆಟ್ಟದ ಸೊಬಗನ್ನು ಸವಿಯಲು ಬರುವ ಪ್ರಕೃತಿ ಪ್ರಿಯರು ನಿರಾಸೆಯಾಗಿದೆ.
ಮಳೆಯ ನೀರಿನ ಜೊತೆ ಮಣ್ಣು, ಬೃಹತ್ ಕಲ್ಲು ಬಂಡೆ ಹಾಗೂ ಮರ ಗಿಡಗಳು ಕುಸಿತವಾಗಿದೆ. ಇಳಿಜಾರಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳು ಸಹ ಉರುಳಿಬಿದ್ದಿರುವ ಘಟನೆ ವರದಿಯಾಗಿದೆ.
ಇದರಿಂದ ನಂದಿಗಿರಿಧಾಮದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಈ ಮಧ್ಯೆ ಬೆಟ್ಟದ ಮೇಲೆ ಚಿಕ್ಕಬಳ್ಳಾಪುರ ಹಾಗೂ ತಾಲೂಕಿನ ವಿವಿಧೆಡೆ ಕಳೆದ ರಾತ್ರಿ ಇಡೀ ಸುರಿದ ಧಾರಾಕಾರ ಮಳೆಗೆ ಇತಿಹಾಸ ಪ್ರಸಿದ್ಧ ನಂದಿಬೆಟ್ಟದ ಗುಡ್ಡಗಳು ಕುಸಿದಿರುವ ಘಟನೆ ಜರುಗಿದೆ.
ಬೆಟ್ಟದ ಮೇಲಿನ ಭಾಗದಿಂದ ಭಾರಿ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಬೆಟ್ಟದ ಕೆಳಗೆ ಇರುವ
ರಂಗಪ್ಪ ವೃತ್ತದ ಬಳಿ ಗುಡ್ಡ ಕುಸಿದು ಗಿರಿಧಾಮದ ರಸ್ತೆ ಬಂದ್ ಆಗಿದೆ.
ಈ ಕಾರಣಕ್ಕಾಗಿ ನಂದಿ ಬೆಟ್ಟಕ್ಕೆ ಬರುತ್ತಿರುವ ಪ್ರವಾಸಿಗರನ್ನು ಪೊಲೀಸರು ಚೆಕ್ ಪೋಸ್ಟ್ ಬಳಿ ತಡೆದು ವಾಪಸ್ ಕಳಿಸುತ್ತಿದ್ದಾರೆ. ಇದರಿಂದ ನಂದಿಬೆಟ್ಟದ ಸೊಬಗನ್ನು ಸವಿಯಲು ಬಯಸುವ ಪ್ರಕೃತಿ ಪ್ರಿಯರಿಗೆ ತಣ್ಣೀರು ಎರಚಿದಂತಾಗಿದೆ.
ಮಳೆಯ ನೀರಿನ ಜೊತೆ ಮಣ್ಣು ಬೃಹತ್ ಕಲ್ಲು ಬಂಡೆ ಮರ ಗಿಡಗಳು ಕುಸಿತವಾಗಿದೆ. ಇಳಿಜಾರಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳು ಸಹ ಉರುಳಿಬಿದ್ದಿರುವ ಘಟನೆ ವರದಿಯಾಗಿದೆ. ಹೆಚ್ಚಿನ ಅನಾಹುತ ತಡೆಯಲು ನಂದಿಬೆಟ್ಟದ ಚೆಕ್ ಪೋಸ್ಟ್ ನ ಸ್ಬಲ್ಪ ದೂರದಲ್ಲೇ ರಸ್ತೆಗೆ ಅಡ್ಡಲಾಗಿ ಮಣ್ಣು ಶೇಖರಣೆ ಮಾಡಲಾಗಿದೆ.
ಇದರಿಂದ ನಂದಿಗಿರಿಧಾಮ ದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ನಂದಿಬೆಟ್ಟದ ಮೇಲೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ ಟಿಡಿಸಿ) ಗೆಸ್ಟ್ ಹೌಸ್ ನಲ್ಲಿ ಸುಮಾರು ಮುವತ್ತಕ್ಕೂ ಹೆಚ್ಚು ಪ್ರವಾಸಿಗರು ತಂಗಿದ್ದರು. ಆದರೆ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರನ್ನು ವಾಪಾಸ್ಸು ಕಳುಹಿಸಲಾಗಿದೆ.
ನಂದಿಬೆಟ್ಟದಲ್ಲಿ ಭೂ ಕುಸಿತವಾಗಿರುವ ಕಾರಣ
ಹೊಟೇಲ್ ಗಳಲ್ಲಿ ತಂಗಿದ್ದ ಪ್ರವಾಸಿಗರ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್ ಟಿಡಿಸಿಯ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ ತಿಳಿಸಿದರು.
ರಸ್ತೆ ಕುಸಿದಿರುವ ಕಾರಣದಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂರು ಬಸ್ ಗಳಲ್ಲಿ ಪ್ರವಾಸಿಗರ ಸ್ಥಳಾಂತರ ಮಾಡಲಾಗಿದೆ.
ನಿಗಮ ನಂದಿಬೆಟ್ಟದ ಹೊಟೇಲುಗಳು ಹಾಗೂ ಪ್ರವಾಸಿ ಸೌಲಭ್ಯ ನಿರ್ವಹಿಸುತ್ತಿದೆ. ನಿನ್ನೆ ರಾತ್ರಿ
ಬೆಳಿಗ್ಗೆ ಅವರೆಲ್ಲರಿಗೂ ಉಪಹಾರ ನೀಡಿ, ಅವರ ಲಗ್ಗೇಜುಗಳನ್ನು ನಿಗಮದ ಸಿಬ್ಬಂದಿ ಬೆಟ್ಟದಿಂದ ಹೊತ್ತುತಂದು ಪ್ರವಾಸಿಗರನ್ನು ಕಾಲುದಾರಿ ಮೂಲಕ ಕರೆತಂದಿದ್ದಾರೆ ಎಂದು ಕಾಪು ಸಿದ್ದಲಿಂಗಸ್ವಾಮಿ ಹೇಳಿದ್ದಾರೆ.
ಅವರೆಲ್ಲರ ವಾಹನಗಳು ಬೆಟ್ಟದ ಮೇಲೇ ಇದ್ದು, ರಸ್ತೆ ಸರಿಪಡಿಸಿದ ನಂತರ ಅವುಗಳನ್ನು ಹೊರತರಲು ಕ್ರಮ ವಹಿಸಲಾಗುವುದು. ಪ್ರವಾಸಿಗರನ್ನು ಬೆಂಗಳೂರಿಗೆ ಬಸ್ ಗಳಲ್ಲಿ ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಕೂಡ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಇಲ್ಲಿನ ಜನರು ಪರದಾಡುವಂತಾಗಿದೆ.