ಬೆಂಗಳೂರು, (www.bengaluruwire.com) : ಕೋವಿಡ್ ಲಸಿಕೆ ನೀಡಿಕೆಯ ಸಂಖ್ಯೆ ಬೆಂಗಳೂರು ನಗರದಲ್ಲಿ ಬುಧವಾರಕ್ಕೆ ಒಂದು ಕೋಟಿ ಮೀರಿದೆ. ಬುಧವಾರ ಸಂಜೆಯ ವೇಳೆಗೆ ಬೆಂಗಳೂರು ನಗರ ಜಿಲ್ಲೆ, ಬಿಬಿಎಂಪಿ ವ್ಯಾಪ್ತಿಯೂ ಸೇರಿದಂತೆ ಒಟ್ಟಾರೆ ನೀಡಿರುವ ಕೋವಿಡ್ ಲಸಿಕೆ ಸಂಖ್ಯೆ
ಇಂದು ಸಂಜೆಗೆ ವೇಳೆಗೆ ನೀಡಲಾದ ಲಸಿಕೆ ಸಂಖ್ಯೆ 1,00,34,598 ಆದಂತಾಗಿದೆ.
ಒಟ್ಟಾರೆ ಜನವರಿ 16 ರಿಂದ 220 ದಿನಗಳವರೆಗೆ ನಡೆದ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ಒಂದು ಡೋಸ್ ಪಡೆದಿರುವವರು 75,90,684 (75.9ಲಕ್ಷ) ಆಗಿದ್ದರೆ, ಎರಡೂ ಡೋಸ್ ಪಡೆದವರ ಸಂಖ್ಯೆ 24,43,914 (24.4 ಲಕ್ಷ) ಆಗಿದೆ.
ಜನವರಿ 16 ರಿಂದ ಬೆಂಗಳೂರು ನಗರದಲ್ಲಿ ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿಕೆ ಆರಂಭವಾಗಿತ್ತು. ಈತನಕ ಆ ವಿಭಾಗದ ಒಟ್ಟಾರೆ 4.13 ಲಕ್ಷ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ. ಇನ್ನು ಫೆಬ್ರವರಿ 8ನೇ ತಾರೀಖಿನಿಂದ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಡೋಸೇಜ್ ನೀಡುವ ಕಾರ್ಯಕ್ರಮ ಆರಂಭವಾಗಿ ಇಲ್ಲಿಯವರೆಗೆ 5.79 ಲಕ್ಷ ಜನರು ಲಸಿಕೆ ಪಡೆದಿದ್ದಾರೆ.
ಮಾರ್ಚ್ 1 ರಿಂದ ನಲವತ್ತೈದರ ನಂತರ ಹಾಗೂ ಹಿರಿಯ ನಾಗರಿಕರಿಗೆ 39.78 ಲಕ್ಷ ಡೋಸ್ ನೀಡಲಾಗಿದೆ. ಮೇ10ನೇ ತಾರೀಖಿನಿಂದ 18 ರಿಂದ 44 ರ ವಯೋಮಾನದ ನಡುವಿನ ಒಟ್ಟು 50.63 ಲಕ್ಷ ಲಸಿಕೆಯನ್ನು ಬಿಬಿಎಂಪಿ ವ್ಯಾಪ್ತಿ ಹಾಗೂ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗಿದೆ.
ಬೆಂಗಳೂರು ನಗರವು ಒಟ್ಟಾರೆ 5 ತಾಲ್ಲೂಕು, ಬಿಬಿಎಂಪಿ 8 ವಲಯದ 198 ವಾರ್ಡ್, 7 ನಗರ ಸ್ಥಳೀಯ ಸಂಸ್ಥೆ(ಸಿಎಂಸಿ)
6 ಪುರಸಭೆ(ಟಿಎಂಸಿ),1 ನಗರಸಭೆ, 87 ಗ್ರಾಮ ಪಂಚಾಯಿತಿಗಳ 1038 ಗ್ರಾಮಗಳಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮವು ಫಲಾನಭವಿಗಳನ್ನು ತಲುಪಿದೆ.
ಈ ಅವಧಿಯಲ್ಲಿ ಬೆಂಗಳೂರು ಜಿಲ್ಲಾಡಳಿತ, ಬಿಬಿಎಂಪಿ ಆರೋಗ್ಯ ಕಾರ್ಯಕರ್ತರು, ವಿಕಲಚೇತನರು, ಇತ್ಯಾದಿ ವರ್ಗಗಳಿರುವ ಸ್ಥಳಗಳಿಗೆ, ಉದ್ದಿಮೆಗಳಿಗೆ, ಆಯಾ ಪ್ರದೇಶಗಳಿಗೆ ತೆರಳಿ ವಿಶೇಷ ಲಸಿಕೆ ನೀಡಿಕೆ ಅಭಿಯಾನ ಹಮ್ಮಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.