ಬೆಂಗಳೂರು, (www.bengaluruwire.com): ನಾಯಂಡಹಳ್ಳಿಯಿಂದ- ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಶುರು ಮಾಡಲು ನಮ್ಮ ಮೆಟ್ರೋ ಸಕಲ ಸಿದ್ದತೆ ನಡೆಸಿದೆ. ಈಗಾಗಲೇ ಮಾರ್ಗ ಸಂಪೂರ್ಣ ರೆಡಿಯಾಗಿದೆ. ಇನ್ನೇನು ವಾಣಿಜ್ಯ ಸಂಚಾರಕ್ಕೆ ಸಿದ್ಧವಾಗಿರೋ ಮಾರ್ಗದಲ್ಲಿ ಇಂದು ರೈಲ್ವೆ ಮಾರ್ಗದ ಸುರಕ್ಷತಾ ಪರೀಕ್ಷೆಯೂ ನಡೆಸಲಾಗಿದೆ.
ಮೆಟ್ರೋ ಎರಡನೇ ಹಂತದ ಕೆಂಗೇರಿ -ನಾಯಂಡನಹಳ್ಳಿ ಮಾರ್ಗದಲ್ಲಿ ಗುರುವಾರ ರೈಲ್ವೆ ಸುರಕ್ಷತಾ ಆಯುಕ್ತ ಅಭಯ್ ಕುಮಾರ್ ರಾಯ್ ಪರಿಶೀಲನೆ ನಡೆಸಿದರು.
ವಯಾಡಕ್ಟ್, ಸ್ಟೇಷನ್ ವರ್ಕ್ಸ್, ಪವರ್ ಸಪ್ಲೈ, ಸಿಸ್ಟಮ್ ವರ್ಕ್ , ಟ್ರ್ಯಾಕ್ ಲೈನಿಂಗ್ ವರ್ಕ್, ಮೆಟ್ರೊ ಸ್ಟೇಷನ್ ಪ್ರವೇಶ, ನಿರ್ಗಮನದ ಸುರಕ್ಷತೆ ಸೇರಿದಂತೆ ಎಲ್ಲಾ ವಿಧವಾದ ಪ್ರಯಾಣಿಕರ ಸುರಕ್ಷತೆ ಬಗ್ಗೆ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದರು. ಇನ್ನು ಆಯುಕ್ತರ ಈ ಪರಿಶೀಲನಾ ಕಾರ್ಯ ಶುಕ್ರವಾರವೂ ಮುಂದುವರೆಯಲಿದೆ. ನಾಳೆ ಸಂಜೆ ವೇಳೆಗೆ ಅಂತಿಮವಾಗಿ ಸುರಕ್ಷತಾ ಪ್ರಮಾಣಪತ್ರ ಮೆಟ್ರೊ ಕೈಸೇರಲಿದೆ.
ನಾಯಂಡನಹಳ್ಳಿ-ಕೆಂಗೇರಿ ಮಾರ್ಗದ ವಿಶೇಷತೆಗಳು:
• ಒಟ್ಟು ಉದ್ದ 7.53 ಕಿಲೋಮೀಟರ್ ಮಾರ್ಗ
• ನೂತನ ಮಾರ್ಗದಿಂದ ಹೆಚ್ಚುವರಿಯಾಗಿ 70 ಸಾವಿರ ಪ್ರಯಾಣಿಕರ ಸೇರ್ಪಡೆ ನಿರೀಕ್ಷೆ
• ಈ ಮಾರ್ಗದ ಒಟ್ಟು ನಿಲ್ದಾಣ 6
• ಒಟ್ಟು ನಿರ್ಮಾಣ ವೆಚ್ಚ 1560 ಕೋಟಿ ರೂ.
• ನಾಯಂಡನಹಳ್ಳಿ – ಕೆಂಗೇರಿ ಹೊಸ ಮಾರ್ಗದಲ್ಲಿ
ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಬೆಂಗಳೂರು ವಿಶ್ವವಿದ್ಯಾಲಯ, ಆರ್.ವಿ. ಕಾಲೇಜು, ಕೆಂಗೇರಿ ಬಸ್ ಡಿಪೋ ಹಾಗೂ ಕೆಂಗೇರಿ ಮೆಟ್ರೊ ನಿಲ್ದಾಣಗಳು ಇರಲಿವೆ
ಸದ್ಯ ರೈಲ್ವೆ ಸೇಫ್ಟಿ ಸರ್ಟಿಫಿಕೇಟ್ ಸಿಗುತ್ತಿದ್ದಂತೆ ಈ ತಿಂಗಳ ಅಂತ್ಯದಲ್ಲಿ ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭದ ಸಿದ್ಧತೆಯಲ್ಲಿ ಬಿಎಂಆರ್ಸಿಎಲ್ ಇದೆ. ರೈಲ್ವೆ ಸುರಕ್ಷತಾ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಜಯ ನಗರದಿಂದ ನಾಯಂಡನಹಳ್ಳಿ ವರೆಗೆ ನೇರಳೆ ಮಾರ್ಗದ ರೈಲು ಸೇವೆ ಸ್ಥಗಿತಗೊಳಿಸಲಾಗಿದ್ದು, ಶುಕ್ರವಾರದಿಂದ ಈ ಸಂಚಾರ ಯಥಾಸ್ಥಿತಿಗೆ ಮರಳಲಿದೆ.
ಒಟ್ಟಿನಲ್ಲಿ ಮೈಸೂರು ರಸ್ತೆ ಯಾವಾಗಲೂ ಟ್ರಾಫಿಕ್ ಕಿರಿಕಿರಿಯಿಂದ ಕೂಡಿರುತ್ತಿತ್ತು. ಈ ಮಾರ್ಗದಲ್ಲಿ ಮೆಟ್ರೋ ಆರಂಭವಾದರೆ ಸಂಚಾರ ದಟ್ಟಣೆಗೆ ಕೊಂಚಮಟ್ಟಿಗೆ ರಿಲೀಫ್ ಸಿಗಲಿದೆ.