ಬೆಂಗಳೂರು, (www.bengaluruwire.com):
ಕಲರ್ಸ್ ಕನ್ನಡದ 8ನೇ ಸೀಸನ್ ನ ಬಿಗ್ ಬಾಸ್ ಕಾರ್ಯಕ್ರಮದ ವಿನ್ನರ್ ಆಗಿ ಮಂಜು ಪಾವಗಡ ಗೆಲವು ಸಾಧಿಸಿದ್ದಾರೆ. ಅಂತೂ 120 ದಿನಗಳ ಸುದೀರ್ಘ ಜರ್ನಿ ಆ ಮೂಲಕ ಕೊನೆಗೊಂಡಿದೆ.
ಮಂಜು ಪಾವಗಡ ಹಾಗೂ ಕೆ.ಪಿ.ಅರವಿಂದ್ ಸಾಕಷ್ಟು ಬಿಗ್ ಬಾಸ್ ಸ್ಪರ್ಧಿಗಳ ಮಧ್ಯೆಯೂ ಉತ್ತಮವಾಗಿ ಸ್ಪರ್ಧಿಸಿ ಅಂತಿಮವಾಗಿ ಕ್ರಮವಾಗಿ ವಿನ್ನರ್ ಮತ್ತು ರನ್ನರಪ್ ಪ್ರಶಸ್ತಿ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೆಲುವು ಸಾಧಿಸಿದ ಮಂಜು ಪಾವಗಡ ಅವರಿಗೆ 53 ಲಕ್ಷ ರೂ. ಬಹುಮಾನ ಹಾಗೂ ರನ್ನರ್ ಅಪ್ ಆದ ಕೆ.ಪಿ.ಅರವಿಂದ್ ಗೆ 11 ಲಕ್ಷ ರೂ. ಬಹುಮಾನ ಲಭಿಸಿದೆ. ಭಾನುವಾರ ರಾತ್ರಿ ಪ್ರಸಾರವಾದ ವರ್ಣರಂಜಿತ ಕಾರ್ಯಕ್ರಮದಲ್ಲಿ ನಟ ಸುದೀಪ್ ಈ ಘೋಷಣೆ ಮಾಡಿದ್ದಾರೆ.
ನಟ ಹಾಗೂ ಬಿಗ್ ಬಾಸ್ ಆಂಕರ್ ಸುದೀಪ್
ಮಂಜು ಪಾವಗಡ ಒಟ್ಟಾರೆ ಅತಿಹೆಚ್ಚು 46 ಲಕ್ಷ ಮತ್ತು ಕೆ.ಪಿ.ಅರವಿಂದ್ 43 ಲಕ್ಷ ಮತ ಪಡೆದಿದ್ದು ವಿಜೇತರಾಗಿದ್ದಾರೆ ಎಂದು ಸುದೀಪ್ “ಬಿಗ್ ಬಾಸ್ 8” ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ತಿಳಿಸಿದರು.
ಫೊಟೊ ಫಿನಿಶ್ ಕಾಂಪಿಟೇಶನ್ ನಲ್ಲಿ ದಿವ್ಯ ಉರುಡಗ, ಕೆ.ಪಿ, ಅರವಿಂದ್ ಹಾಗೂ ಮಂಜು ಪಾವಗಡ ಅಂತಿಮವಾಗಿ ಕಣದಲ್ಲಿದ್ದರು. ಸುದೀಪ್ ನೇತೃತ್ವದಲ್ಲಿ ಮೂಡಿಬಂದ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಕರೋನಾ ಸೋಂಕಿನ ಕಾರಣಕ್ಕೆ ಎರಡು ಸೀಸನ್ ನಲ್ಲಿ ನಡೆದಿತ್ತು.
ಒಟ್ಟಾರೆ ಕನ್ನಡದಲ್ಲಿ ನಡೆದ ಈವರೆಗಿನ ಬಿಗ್ ಬಾಸ್ ಸೀಸನ್ ನಲ್ಲಿ 120 ದಿನಗಳ ಕಾಲ ಸುದೀರ್ಘ ಅವಧಿವರೆಗೆ ನಡೆದ ಮೊದಲ ಬಿಗ್ ಬಾಸ್ ಕಾರ್ಯಕ್ರಮ ಇದಾಗಿದೆ. ಮೊದಲ ಸೀಸನ್ ಇನ್ನಿಂಗ್ಸ್ 72 ದಿನ ಹಾಗೂ ಎರಡನೇ ಇನ್ನಿಂಗ್ಸ್ 48 ದಿನ ನಡೆದ ಈ ರಿಯಾಲಿಟಿ ಶೋ ಕಿರುತೆರೆ ಕಾರ್ಯಕ್ರಮದಲ್ಲಿ ಹೊಸ ದಾಖಲೆ ನಿರ್ಮಿಸಿದಂತಾಗಿದೆ. ಒಟ್ಟು 20 ಮಂದಿ ಸ್ಪರ್ಧಿಗಳಿಂದ ಈ ರಿಯಾಲಿಟಿ ಶೋ ಆರಂಭವಾಗಿತ್ತು.
ಟಾಪ್ 3 ಸ್ಪರ್ಧಿಗಳ ಮುಂಚೆ, ಟಾಪ್- 5 ಸ್ಪರ್ಧೆಯಲ್ಲಿ ಮಂಜು ಪಾವಗಡ, ಅರವಿಂದ್, ವೈಷ್ಣವಿ, ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ಇದ್ದರು.