ನವದೆಹಲಿ ( www.bengaluruwire.com ) : ಭಾರತೀಯ ವಾಯುಪಡೆ ( ಐಎಎಫ್ ) ಯ ನಾಲ್ವರು ಕ್ರೀಡಾಳುಗಳು ಹಾಗೂ ಒಬ್ಬ ರೆಫರಿ ಸೇರಿದಂತೆ ಐವರು ಈ ಬಾರಿಯ ಟೊಕಿಯ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
25 ವರ್ಷಗಳ ದೀರ್ಘಾವಧಿ ಬಳಿಕ ಐಎಎಫ್ ನ ಸ್ಪರ್ಧಾಳುಗಳು ಟೋಕಿಯೋ ಒಲಂಪಿಕ್ಸ್ ನಲ್ಲಿ ಪದಕ ಪಡೆಯಲು ಎದುರಾಳಿ ಸ್ಪರ್ಧಿಗಳೊಂದಿಗೆ ಸೆಣಸಲಿದ್ದಾರೆ.
ಜಾವಲಿನ್ ಥ್ರೋ ವಿಭಾಗದಿಂದ ಸಾರ್ಜೆಂಟ್ ಶಿವಪಾಲ್ ಸಿಂಗ್
4×400 ಮೀ. ಮಿಕ್ಸೆಡ್ ರಿಲೇಯಲ್ಲಿ ಸಾರ್ಜೆಂಟ್ ನೊಯ ನಿರ್ಮಲ್ ಟಾಮ್
ಶೂಟಿಂಗ್ ವಿಭಾಗದಿಂದ ದೀಪಕ್ ಕುಮಾರ್ ಸಿಂಗ್
4×400 ಮೀ. ಮಿಕ್ಸೆಡ್ ರಿಲೇ ವಿಭಾಗದಿಂದ ಅಲೆಕ್ಸ್ ಅಂಥೊನಿ
ಅಶೋಕ್ ಕುಮಾರ್ ರೆಸಲಿಂಗ್ ನಲ್ಲಿ ರೆಫರಿಯಾಗಿ ಭಾಗವಹಿಸಲು ಆಯ್ಕೆ
ಒಟ್ಟಾರೆ ಟೋಕಿಯೋ ಒಲಂಪಿಕ್ಸ್ ನಲ್ಲಿ ಐಎಎಫ್ ನಿಂದ ನಾಲ್ವರು ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ.
ಭಾರತೀಯ ವಾಯುಪಡೆಯ ಕ್ರೀಡಾ ವಿಭಾಗದಲ್ಲಿ ಹಲವು ಪ್ರತಿಭೆಗಳಿದ್ದು ವರ್ಷದಿಂದ ವರ್ಷಕ್ಕೆ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಂಡು ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಭಾರತೀಯ ವಾಯುಪಡೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಒಲಂಪಿಕ್ಸ್ ಗೆ ಆಯ್ಕೆಯಾದ ಐಎಎಫ್ ನಲ್ಲಿನ ಕ್ರೀಡಾಳುಗಳ ಪೈಕಿ ಸಾರ್ಜೆಂಟ್ ಶಿವಪಾಲ್ ಸಿಂಗ್ 2019ರ ಅಕ್ಟೋಬರ್ ನಲ್ಲಿ ಚೈನಾದ ವುಹಾನ್ ನಲ್ಲಿ ನಡೆದ ಜಾವಲಿನ್ ಥ್ರೊ ನಲ್ಲಿ 83.3 ಮೀ ದೂರ ಎಸೆದು ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಸಾರ್ಜೆಂಟ್ ನೊಯ ನಿರ್ಮಲ್ ಟಾಮ್ 2019 ರಲ್ಲಿ ಐಎಎಫ್ ಎಫ್ ವರ್ಲ್ಡ್ ಚಾಂಪನಿಯನ್ ಶಿಪ್ ನಲ್ಲಿ ಪಾಲ್ಗೊಂಡಿದ್ದರು.
ದೀಪಕ್ ಕುಮಾರ್ ಸಿಂಗ್ 2019ರ ನವೆಂಬರ್ ನಲ್ಲಿ ದೋಹಾದಲ್ಲಿ ನಡೆದ 14ನೆಯ ಏಷ್ಯನ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇನ್ನು ಅಲೆಕ್ಸ್ ಅಂಥೊನಿ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಮಹಾಮಂಡಲ ನಿಗಧಿಪಡಿಸಿದ ಅರ್ಹತೆ ಪಡೆದು ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಲು ಅವಕಾಶ ಪಡೆದುಕೊಂಡಿದ್ದಾರೆ.
ಅಶೋಕ್ ಕುಮಾರ್ ರೆಸ್ಲಿಂಗ್ ರೆಫರಿಯಾಗಿ ಸತತವಾಗಿ ಒಲಂಪಿಕ್ಸ್ ಗೇಮ್ಸ್ ನಲ್ಲಿ ಆಯ್ಕೆಯಾಗಿರುವ ಮೊದಲ ಭಾರತೀಯ ರೆಫರಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.