ಬೆಂಗಳೂರು ( www.bengaluruwire.com ) : ರಾಜ್ಯದಾದ್ಯಂತ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ 300 ಅಧಿಕಾರಿಗಳು 9 ಮಂದಿ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿ ಸೇರಿದಂತೆ ಮತ್ತಿತರ 40 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಎಸಿಬಿ ದಾಳಿ ನಡೆದಿರುವ ಅಧಿಕಾರಿಗಳ ಹೆಸರು, ಹುದ್ದೆ, ಕಾರ್ಯನಿರ್ವಹಣೆಯ ಸ್ಥಳ ಈ ಕೆಳಕಂಡಂತಿದೆ ;
1) ಆರ್ ಪಿ ಕುಲಕರ್ಣಿ, ಸಿಇ, ಕೆಆರ್ ಡಿಸಿಎಲ್
2) ಎಚ್ ಆರ್ ಕೃಷ್ಣಪ್ಪ, ಸಹಾಯಕ ನಿರ್ದೇಶಕ ಮಾಲೂರು, ನಗರ ಯೋಜನಾ ಪ್ರಾಧಿಕಾರ, ಕೋಲಾರ
3) ಕೃಷ್ಣಮೂರ್ತಿ, ಹಿರಿಯ ಮೋಟಾರು ವಾಹನ ನಿರೀಕ್ಷಕ, ಕೋರಮಂಗಲ
4) ಜಿ. ಶ್ರೀಧರ್, ಇಇ, ಜಿಲ್ಲಾ ನಗರಾಭಿವೃದ್ಧಿ ಕೋಶ ಡಿಸಿ ಕಚೇರಿ, ಮಂಗಳೂರು
5) ಕೃಷ್ಣ .ಎಸ್. ಹೆಬ್ಸರ್, ಇಇ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್, ಉಡುಪಿ
6) ಸುರೇಶ್ ಮೊಹ್ರೆ, ಜೆಇ, ಪಿಆರ್‌ಇ, ಬೀದರ್
7) ವೆಂಕಟೇಶ್ ಟಿ, ಡಿಸಿಎಫ್, ಸಾಮಾಜಿಕ ಅರಣ್ಯ, ಮಂಡ್ಯ
8) ಸಿದ್ದರಾಮ ಮಲ್ಲಿಕಾರ್ಜುನ್ ಬಿರಾದಾರ, ಎಇಇ, ಹೆಸ್ಕಾಮ್, ವಿಜಯಪುರ
9) ಎ ಎನ್ ವಿಜಯ್ ಕುಮಾರ್, ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್, ಬಳ್ಳಾರಿ
ಆರ್ .ಪಿ ಕುಲಕರ್ಣಿ ಅಪಾರ್ಟ್ಮೆಂಟ್ ಮೇಲೆ ದಾಳಿ :
ಕುಲಕರ್ಣಿ ಮೂರು ಅಪಾರ್ಟ್ಮೆಂಟ್ ಗಳನ್ನ ಬಾಡಿಗೆ ನೀಡಿದ್ದರು. ಜಯನಗರ ಹಾಗೂ ಬನಶಂಕರಿ ಅಪಾರ್ಟ್ಮೆಂಟ್ ನಲ್ಲಿ ಕುಲಕರ್ಣಿ ಹಾಗೂ ಆತನ ಮಗ ವಾಸವಾಗಿದ್ದರು.
ರಾಜಾಜಿನಗರದ ಬೆಂಗಳೂರು ಒನ್ ಅಪಾರ್ಟ್ಮೆಂಟ್ ಹಾಗೂ
ಮೈಸೂರಿನ ಯಾದವಗಿರಿ ಇಂಡಸ್ಟ್ರಿಯಲ್ ಏರಿಯಾದಲ್ಲಿನ ಮನೆ ಬಾಡಿಗೆಗೆ ನೀಡಿದ್ದರು. ಮಾಯಾ ದೇವಿ ಆಂಡ್ ಕೋ ಹಾಗೂ ಕೆಮ್ ಟೆಕ್ ಹೆಸರಲ್ಲಿ ಕಂಪೆನಿ ಮಾಡಿದ್ದರು.
ಎರಡು ಕೋಟಿ ಯಷ್ಟು ಇನ್ ಶ್ಯುರೆನ್ಸ್ ಮಾಡಿಸಿರುವ ದಾಖಲೆಗಳು ಎಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದೆ.
ಐದು ಅಪಾರ್ಟ್ಮೆಂಟ್ ಗಳ ಬಗ್ಗೆಯೂ ಮಾಹಿತಿ ಕಲೆಹಾಕಿದ್ದು, ಸದ್ಯ 15 ಕೋಟಿಯ ದಾಖಲೆಪತ್ರಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಲ ಬೇನಾಮಿ ವ್ಯಕ್ತಿಗಳ ದಾಖಲೆಗಳು ಕೂಡ ಫ್ಲ್ಯಾಟ್ ನಲ್ಲಿ ಪತ್ತೆಯಾಗಿದ್ದು, ಬೇನಾಮಿ ದಾಖಲೆಗಳ ಬಗ್ಗೆ ಕುಲಕರ್ಣಿ ಬಾಯಿಬಿಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಎಚ್.ಆರ್.ಕೃಷ್ಣಪ್ಪ ಮನೆ- ಕಚೇರಿ ಮೇಲೆ ಎಸಿಬಿ ದಾಳಿ :
ಕೋಲಾರ ಜಿಲ್ಲೆಯ ಮಾಲೂರು ನಗರ ಸಭೆಯ ಯೋಜನಾ ನಿರ್ದೇಶಕ ಎಚ್ ಆರ್ ಕೃಷ್ಣಪ್ಪ ಮನೆ ಮತ್ತಿತರ ದಾಖಲೆ ಹಾಗೂ ಆಸ್ತಿಪತ್ರಗಳ ಪರಿಶೀಲನೆಯನ್ನು ಎಸಿಬಿ ಅಧಿಕಾರಿಗಳು ಕೈಗೊಂಡಿದ್ದಾರೆ.
ಇವರ ಸ್ವ ಗ್ರಾಮವಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ, ಮಾಲೂರು ಮನೆ ಮತ್ತು ಕಚೇರಿ ಐದು ಕಡೆ ಎಕ ಕಾಲಕ್ಕೆ ಎಸಿಬಿ ದಾಳಿ ನಡೆದಿದೆ.
ಅಡಿಕೆ ತೋಟ, ಬೇರೆ ಬೇರೆ ಕಡೆ ಖರೀದಿಸಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ನೇತ್ರತ್ವದ ತಂಡದಿಂದ ದಾಳಿ ನಡೆದಿದೆ.
ಆರ್ ಟಿಒ ಇನ್ಸ್ ಪೆಕ್ಟರ್ ಕೃಷ್ಣಮೂರ್ತಿ ಮನೆ ಮೇಲೆ ರೈಡ್ :
ಕೋರಮಂಗಲದ ಸೀನಿಯರ್ ಮೋಟರ್ ವೆಹಿಕಲ್ ಇನ್ಸ್ ಪೆಕ್ಟರ್ ಕೃಷ್ಣಮೂರ್ತಿ ಅವರ ವಿಜಯನಗರದ ಆರ್ ಪಿಸಿ ಲೇಔಟ್ ನಲ್ಲಿರುವ ಮನೆ, ಕೊರಟಗೆರೆಯಲ್ಲಿರುವ ಫಾರ್ಮ್ ಹೌಸ್, ಎಚ್ ಎ ಎಲ್ ಎರಡನೇ ಹಂತದಲ್ಲಿರುವ ಮನೆ ಮೇಲೆ ದಾಳಿ. ಎಸಿಬಿ ಎಸ್ ಪಿ ಕಲಾ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಬಸವೇಶ್ವರ ನಗರ ಆಸುಪಾಸಿನಲ್ಲೇ ಸಾಕಷ್ಟು ಸ್ಥಿರಾಸ್ತಿಗಳನ್ನು ಮಾಡಿಕೊಂಡಿರೋ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಹಿಂದೆ ಕೆಜಿಎಫ್ ನಲ್ಲಿ ಆರ್ ಟಿ ಓ ಇನ್ಸ್ ಪೆಕ್ಟರ್ ಆಗಿದ್ದ ಕೃಷ್ಣಮೂರ್ತಿ. ಎಆರ್ ಟಿ ಓ ಇನ್ಚಾರ್ಜ್ ಆಗಿಯೂ ಮೂರ್ತಿ ಕೆಲಸ ಮಾಡಿದ್ದರು .
ಅವರ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೆಜಿಎಫ್ ನಲ್ಲಿದ್ದಾಗ ಕೇಳಿಬಂದಿತ್ತು. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ವರ್ಗಾವಣೆಯಾದ್ರೂ ಕೋರಮಂಗಲ ಆರ್ ಟಿ ಓ ನಲ್ಲೇ ಉಳಿದಿದ್ದರು. ಟ್ರಾನ್ಫರ್ ರಿವೋಕ್ ಮಾಡಿಕೊಳ್ಳೋ ಭರದಲ್ಲಿದ್ದರು.
ಉಳಿದಂತೆ ಇತರ ಕಡೆಗಳಲ್ಲಿಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸ್ಥಳಗಳಲ್ಲಿ ಪರಿಶೀಲನೆ ಮತ್ತು ವಿಚಾರಣೆಯನ್ನು ಮುಂದುವರೆಸಿದ್ದಾರೆ.