ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಗುರುವಾರ ತಮ್ಮ ಮೊದಲ ಕೋವಿಡ್ ಲಸಿಕೆಯನ್ನು ತಮ್ಮ ಮನೆಯಲ್ಲಿ ಹಾಕಿಸಿಕೊಂಡರು.
ಈ ವಿಷಯವನ್ನು ಅವರ ಮಗಳು ಸೌಂದರ್ಯ ರಜನಿಕಾಂತ್, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಜನಿಕಾಂತ್, ಹೈದರಾಬಾದ್ ನಲ್ಲಿನ ರಾಮೋಜಿ ಫಿಲಮ್ ಸಿಟಿಯಲ್ಲಿ ಒಂದು ತಿಂಗಳ ಕಾಲ ತಮ್ಮ ಅಭಿನಯದ 178ನೆಯ ಚಲನಚಿತ್ರ ಅಣ್ಣಾತೆ ಶೂಟಿಂಗ್ ಮುಗಿಸಿ ಬುಧವಾರ ಚೆನ್ನೈಗೆ ಆಗಮಿಸಿದರು.
ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಗೆ ಸೇರಿದ ಚಾರ್ಟರ್ ಫ್ಲೈಟ್ ನಲ್ಲಿ ಬುಧವಾರ ಚೆನ್ನೈಗೆ ಬಂದಿಳಿದರು. ರಜನಿಕಾಂತ್ ತಮಿಳುನಾಡಿನ ಕೋವಿಡ್ ನಿಯಮಾವಳಿಯಂತೆ ಒಂದು ವಾರಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿರುತ್ತಾರೆ.
ಹೀಗಾಗಿ ಗುರುವಾರ ಪೋಯೆಸ್ ಗಾರ್ಡನ್ ಏರಿಯಾದಲ್ಲಿನ ತಮ್ಮ ಮನೆಯಲ್ಲೆ ಲಸಿಕೆಯನ್ನು ಹಾಕಿಸಿಕೊಂಡರು.