ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ಸೋಂಕು ಹೆಚ್ಚಳವಾಗಿ ಲಾಕ್ ಡೌನ್ ಆಗಿದ್ದರೇನಂತೆ. ನವಿಲಿನ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿಲ್ಲ. ನಗರದ ಮನೆಯೊಂದರ ಅಡುಗೆ ಮನೆಗೆ ಭೇಟಿಕೊಟ್ಟ ರಾಷ್ಟ್ರಪಕ್ಷಿ ನವಿಲು ಸ್ವಚ್ಛಂದವಾಗಿ ಓಡಾಟ ನಡೆಸಿತ್ತು.
ವಿದ್ಯಾರಣ್ಯಪುರದ ವಿಶ್ವನಗರದ ರಮೇಶ್ ಮಾಧವ್ ಅವರ ಮನೆಗೆ ನವಿಲೊಂದು ಸೋಮವಾರ ಬೆಳಗ್ಗೆ ಬೆಳಗ್ಗೆಯೇ ಎಂಟ್ರಿ ಕೊಟ್ಟಿತ್ತು. ಆಕಸ್ಮಿಕವಾಗಿ ಮನೆಯೊಳಗೆ ಬಂದ ಆ ನವಿಲು ಮನೆಯ ಒಳಗೆಲ್ಲ ಓಡಾಡಿ ಸೀದಾ ಅಡುಗೆ ಮನೆಯ ಪದಾರ್ಥಗಳಿದ್ದ ಡಬ್ಬಿ ಇಡುವ ಸ್ಲಾಬ್ ಮೇಲೆ ಹತ್ತಿ ಕೂತಿತ್ತು.
ಇದನ್ನು ಗಮನಿಸಿದ ರಮೇಶ್ ಮಾಧವ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅರಣ್ಯ ಘಟಕಕ್ಕೆ ಪೋನಾಯಿಸಿದರು. ಆ ಕಡೆಯಿಂದ ಬಂದ ವನ್ಯಜೀವಿ ಕಾರ್ಯಕರ್ತ ವಿವೇಕ್ ಅರಸ್, ಆ ಸುಂದರ ನವಿಲನ್ನು ಹಿಡಿದು ಸುರಕ್ಷಿತವಾಗಿ ಜಾರುಬಂಡೆ ಕಾವಲ್ ವ್ಯಾಪ್ತಿಯಲ್ಲಿ ಬಿಟ್ಟಿ ಬಂದಿದ್ದಾರೆ.
ಅಡುಗೆ ಮನೆಗೆ ಆಗಮಿಸಿದ ಆ ಅಪರೂಪದ ಅತಿಥಿಯನ್ನು ಕಂಡು ರಮೇಶ್ ಮಾಧವ್ ಅವರ ಕುಟುಂಬ ಸಂತಸಗೊಂಡಿದ್ದಂತು ಸತ್ಯ.