ಬೆಂಗಳೂರು : ರಾಜ್ಯದಲ್ಲಿ ಕರೋನಾ ಎರಡನೇ ಅಲೆ ಹೆಚ್ಚಳವಾಗುತ್ತಿದ್ದು, ಸರ್ಕಾರ ಇತ್ತೀಚೆಗೆ ತಂದಿರುವ ನಿರ್ಬಂಧಗಳು ಸಾರ್ವಜನಿಕರ ಒಳತಿಗಾಗಿ. ಸರ್ಕಾರ ನೀಡಿರುವ ಸಲಹೆಗಳನ್ನು, ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಕರ್ನಾಟಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ವೈರಾಲಜಿಸ್ಟ್ ಡಾ.ವಿ.ರವಿ ಮನವಿ ಮಾಡಿದ್ದಾರೆ.
ಕರೋನಾ ಸೋಂಕು ಎರಡನೇ ಅಲೆ ಜನಸಂದಣಿ, ಮುಚ್ಚಿದ ಸ್ಥಳಗಳಲ್ಲಿ ಹೆಚ್ಚಳವಾಗುತ್ತಿದೆ. ಹಾಗಾಗಿ ಇಂತಹ ಕಡೆ ಹೋಗುವುದನ್ನು ಆದಷ್ಟು ತಪ್ಪಿಸುವಂತೆ ಅವರು ಎಚ್ಚರಿಸಿದ್ದಾರೆ.