ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2021-22 ರ ಆಯವ್ಯಯ ಆಡಳಿತಗಾರರ ನೇತೃತ್ವದಲ್ಲಿ ಶನಿವಾರ ಮಂಡನೆಯಾಯಿತು.
ಮಲ್ಲೇಶ್ವರದಲ್ಲಿರುವ ಪಾಲಿಕೆಯ ಐಪಿಪಿ ತರಬೇತಿ ಕೇಂದ್ರದಲ್ಲಿ ಹಣಕಾಸು ಇಲಾಖೆ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, 9,286.80 ಕೋಟಿ ರೂ. ಗಾತ್ರದ ಬಜೆಟ್ ಅನ್ನು ಪ್ರಕಟಿಸಿದ್ದಾರೆ.
ಬಜೆಟ್ ಮುಖ್ಯಾಂಶಗಳು ಈ ಕೆಳಕಂಡಂತಿದೆ :
• ಪಾಲಿಕೆ ವಲಯ, ವಿಧಾನಸಭಾ ಕ್ಷೇತ್ರ, ವಾರ್ಡ್ ಗಳ ಆರ್ಥಿಕ ಹಾಗೂ ಆಡಳಿತಾತ್ಮಕ ಅಧಿಕಾರ ವಿಕೇಂದ್ರಿಕರಣಕ್ಕೆ 2,000 ಕೋಟಿ ರೂ. ಅನುದಾನ.
• ಆಸ್ತಿ ತೆರಿಗೆ ಸಂಗ್ರಹದಲ್ಲಿ ನಾಗರೀಕನ್ನು ಪ್ರೋತ್ಸಾಹಿಸಲು ಆಯಾ ವಾರ್ಡ್ ನಲ್ಲಿ ಸಂಗ್ರಹಿಸಿದ ಆಸ್ತಿ ತೆರಿಗೆ ಶೇ.1ರಷ್ಟು ಅನುದಾನ ಆ ವಾರ್ಡ್ ನಲ್ಲಿಯೇ ಬಳಕೆ.
• ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಇ-ಆಸ್ತಿ ತಂತ್ರಾಂಶ ಜಾರಿಗೆ ಉದ್ದೇಶ.
• ಕಂದಾಯ ಇಲಾಖೆ ಸಹಕಾರದೊಂದಿಗೆ ಬಿ- ಖಾತೆ ರದ್ದುಗೊಳಿಸಿ, ಎ-ಖಾತೆವೊಂದನ್ನೇ ಬಳಸಲು ಕ್ರಮ.
• ಕರೋನಾ ನಿಯಂತ್ರಣಕ್ಕೆ 337 ಕೋಟಿ ರೂ. ಅಗತ್ಯ ನೆರವು.
• ನಗರದ ಘನತ್ಯಾಜ್ಯ ನಿರ್ವಹಣೆಗೆ 1,622.33 ಕೋಟಿ ರೂ. ಅನುದಾನ ಮೀಸಲು.
• 110 ಹಳ್ಳಿಗಳಲ್ಲಿ ಜಲಮಂಡಳಿಯಿಂದ ನೀರಿನ ಕೊಳವೆ ಹಾಗೂ ಒಳಚರಂಡಿಗೆ ಅಗೆದಿರುವ ರಸ್ತೆ ದುರಸ್ಥಿಗೆ 1,000 ಕೋಟಿ ರೂ. ಮೀಸಲು.
• 67 ನೂತನ ಸಾರ್ವಜನಿಕ ಶೌಚಾಲಯ ನಿರ್ಮಾಣ ಗುರಿ
• ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದಂದು ಪಾಲಿಕೆ ಪ್ರತಿ ಪೌರಕಾರ್ಮಿಕರಿಗೆ 5 ಸಾವಿರ ನೇರ ಪಾವತಿ.
• ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಯೋಜನೆ ಅರ್ಜಿ ಬೆಂಗಳೂರು ಒನ್ ಕೇಂದ್ರ ಹಾಗೂ ಪಾಲಿಕೆ ವೆಬ್ ಸೈಟ್ ನಲ್ಲಿ ಸಲ್ಲಿಕೆಗೆ ಅವಕಾಶ.
• ಪಾಲಿಕೆ ಶಾಲಾ- ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ನಲ್ಲಿ ಶೇ.85 ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 25 ಸಾವಿರ ನೀಡಿಕೆ ಅನುದಾನ. ಶೇ.85 ರಷ್ಟು ಅಂಕ ಪಡೆದ ಶಾಲೆಗಳ ಶಿಕ್ಷಕ ವೃಂದಕ್ಕೆ 2 ಲಕ್ಷ ಪ್ರೋತ್ಸಾಹ ಧನ ನೀಡಲು ಕ್ರಮ.
• ಜುಲೈ-2021 ಅಂತ್ಯದ ಒಳಗೆ ಮೊದಲ ಹಂತದಲ್ಲಿ ಒಂದು ಲಕ್ಷದ ಎಲ್ ಇಡಿ ಬೀದಿ ದೀಪ ಪೂರ್ಣ.
• ಧೀರ್ಘಕಾಲದಿಂದ ಸ್ಥಗಿತಗೊಂಡಿರುವ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಆದ್ಯತೆ. ಹಿಸ ಕಾಮಗಾರಿಗಳ ಪ್ರಸ್ತಾವವಿಲ್ಲ.
• ಭವಿಷ್ಯದಲ್ಲಿ ಮುನಿಸಿಪಲ್ ಬಾಂಡ್ ಮೂಲಕ ಪಾಲಿಕೆಯು ಹಣಕಾಸು ಮಾರುಕಟ್ಟೆಯಿಂದ ನಿಧಿ ಸಂಗ್ರಹಣೆಗೆ ಕ್ರಮ.
• ಪಾಲಿಕೆ ಆರ್ಥಿಕ ಶಿಸ್ತು ಮತ್ತು ಲೆಕ್ಕಪತ್ರ ನಿರ್ವಹಣೆ ವ್ಯವಸ್ಥೆಯಲ್ಲಿ ಸುಧಾರಣೆಗಾಗಿ ನೂತನ ‘ಮುನಿಸಿಪಲ್ ಅಕೌಂಟಿಂಗ್ ಮ್ಯಾನುವಲ್’ ಪದ್ಧತಿ ಅಳವಡಿಕೆ.
• ಪಾರದರ್ಶಕ ವ್ಯವಸ್ಥೆಗಾಗಿ ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿ ಕೆಲಸಗಳ ಸಂದರ್ಭದಲ್ಲೇ ಅವುಗಳ ಮಾಹಿತಿ ಪಾಲಿಕೆ ವೆಬ್ ಸೈಟ್ ನಲ್ಲಿ ಅಳವಡಿಕೆ.
• ಕಟ್ಟಡ ಪರವಾನಗಿಯಿಂದ ವಾಸ ಧೃಢೀಕರಣ ಪ್ರಮಾಣಪತ್ರ ತನಕ ಏಕೀಕೃತ ತಂತ್ರಾಂಶದ ಮೂಲಕ ಒಂದೇ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯುವಿಕೆ.
• ಪ್ರತಿ ವಾರ್ಡ್ ಸಮಿತಿಗೆ ಪಾದಚಾರಿ ಮಾರ್ಗದ ದುರಸ್ತಿಗಾಗಿ ತಲಾ 10 ಲಕ್ಷ ರೂ. ಮೀಸಲು.
• ನಾಗರೀಕರ ಸೇವೆಗಳಾದ ಖಾತಾ, ಆಸ್ತಿ ತೆರಿಗೆ, ಜನನ ಮತ್ತು ಮರಣ ಪ್ರಮಾಣ ಪತ್ರ, ಉದ್ಯಮ ಪರವಾನಗಿ ಇತ್ಯಾದಿ ಸೇವೆಗಾಗಿ ಏಕೀಕೃತ ಡಿಜಿಟಲ್ ಪೋರ್ಟಲ್ ವ್ಯವಸ್ಥೆ ಕಲ್ಪಿಸಲಾಗುವುದು.
• ಹಸಿರು ಬೆಂಗಳೂರು ಸಂರಕ್ಷಣೆ ದೃಷ್ಟಿಯಿಂದ ಪಾಲಿಕೆಯ 25 ಕೆರೆಗಳ ಪುನಶ್ಚೇತನ.