11 ಜಿಲ್ಲೆಗಳಲ್ಲಿ 9 ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಮತ್ತಿತರ ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ಮಾ.9ರಂದು ಪರಿಶೀಲನೆ ನಡೆಸಿದ್ದರು. ಆ ಅಧಿಕಾರಿಗಳ ಬಳಿ ಸಾರ್ವಜನಿಕ ನೌಕರರಾಗಿ ಬಲ್ಲ ಮೂಲಗಳ ಆದಾಯಕ್ಕಿಂತ ಶೇ.82.33 ರಿಂದ ಬರೋಬ್ಬರಿ 364 ಪಟ್ಟು ಹೆಚ್ಚು ಚರ ಸ್ಥಿರಾಸ್ತಿಗಳನ್ನು ಹೊಂದಿರುವುದು ಕಂಡುಬಂದಿದೆ. ಅದರಲ್ಲಿ 4.12 ಕೆ.ಜಿ. ಚಿನ್ನ, 35.21 ಕೆಜಿ ಬೆಳ್ಳಿ ಹಾಗೂ 47.69 ಲಕ್ಷ ರೂ. ನಗದು ಪತ್ತೆಯಾಗಿದೆ. ಹಾಗೂ ಪರಿಶೀಲನೆ ಕಾರ್ಯ ಮುಂದುವರೆದಿದೆ.