ಬೆಂಗಳೂರು : ಮುಖ್ಯಮಂತ್ರಿಯೂ ಆಗಿರುವ ಬಿ.ಎಸ್.ಯಡಿಯೂರಪ್ಪ ಹಣಕಾಸು ಸಚಿವರಾಗಿ 2021-22ನೇ ಸಾಲಿನಲ್ಲಿ 2,46,207 ಕೋಟಿ ರೂ. ಮೊತ್ತದ 8ನೇ ಬಜೆಟ್ ಮಂಡಿಸುವುದರೊಂದಿಗೆ ಮತ್ತೊಂದು ದಾಖಲೆ ಬರೆದಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ಆಯವ್ಯಯ ಮಂಡಿಸಿದ ಎರಡನೇ ಸ್ಥಾನ ಅವರಿಗೆ ಸೇರುವಂತಾಗಿದೆ. ಈತನಕ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ ತಲಾ 13 ಬಜೆಟ್ ಮಂಡಿಸಿ ದಾಖಲೆ ಬರೆದಿದ್ದರು.
ಬಿ.ಎಸ್.ವೈ ತಮ್ಮ ಬಜೆಟ್ ನಲ್ಲಿ ಮಂಡಿಸಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸೂತ್ರದಂತೆ ಬಜೆಟ್ ನಲ್ಲಿ ಎಲ್ಲವನ್ನೂ ಸರಿದೂಗಿಸುತ್ತಾ ಬೆಂಗಳೂರಿನ ಸಮಗ್ರ ಅಭಿವೃದ್ದಿಗೆ 7,795 ಕೋಟಿ ಬೃಹತ್ ಅನುದಾನದ ಯೋಜನೆಗಳನ್ನು ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.
ಆದ್ರೆ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಘೋಷಿತ ಯೋಜನೆಗಳಿಗೆ ಹಣವನ್ನು ಹೇಗೆ ಹೊಂದಿಸಿಕೊಳ್ಳುತ್ತದೆ ಎನ್ನುವುದಕ್ಕೆ ಖುದ್ದು ಮುಖ್ಯಮಂತ್ರಿಗಳು ಉತ್ತರಿಸಬೇಕಿದೆ.
ರಾಜ್ಯ ಬಜೆಟ್ ನಲ್ಲಿ ಬೆಂಗಳೂರಿಗೆ ರಾಜ್ಯ ಸರ್ಕಾರ ಕೊಟ್ಟಿದ್ದೇನು ಎಂಬುದರ ಹೈಲೈಟ್ಸ್ ಈ ಕೆಳಕಂಡಂತಿದೆ.
ಬೆಂಗಳೂರು ನಗರದ ಸಮಗ್ರ ಅಭಿವೃದ್ದಿಗೆ ಒಟ್ಟಾರೆಯಾಗಿ 7,795 ಕೋಟಿ ಅನುದಾನವನ್ನು ರಾಜ್ಯ ಬಜೆಟ್ ನಲ್ಲಿಮೀಸಲಿಡಲಾಗಿದೆ.
• ಗಾರ್ಮೆಂಟ್ಸ್ ಮಹಿಳೆಯರಿಗೆ ಬಿಎಂಟಿಸಿಯಲ್ಲಿ ಸಂಚರಿಸಲು“ವನಿತಾ ಸಂಗಾತಿ”
• 40 ಲಕ್ಷ ರೂ. ವರಗಿನ ಫ್ಲ್ಯಾಟ್ ಖರೀದಿಗಿಲ್ಲ ಮುದ್ರಾಂಕ ಶುಲ್ಕದ ಹೊರೆ
• ಯಶವಂತಪುರ ಎಪಿಎಂಸಿ ಮೇಲ್ದರ್ಜೆಗೆ
• ಸಿಂಗೇನ ಅಗ್ರಹಾರದಲ್ಲಿ ವ್ಯವಸ್ತಿತ ಮಾರುಕಟ್ಟೆ
• 67 ಕಿಲೋಮೀಟರ್ ಫೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಪ್ರಾರಂಭಿಸಲು ಕ್ರಮ
• 14,788 ಕೋಟಿ ರೂ. ವೆಚ್ಚದಲ್ಲಿ 58.2 ಕಿ.ಮೀ ಉದ್ದದ ಹೊರವರ್ತುಲ ರಸ್ತೆ ನಿರ್ಮಾಣ. ಏರ್ ಪೋರ್ಟ್ ಮೆಟ್ರೊ ಜಾಲ 2A, 2B ಅನುಷ್ಟಾನ.
• ಬೈಯ್ಯಪ್ಪನಹಳ್ಳಿಯಲ್ಲಿ ಬೃಹತ್ ವೃಕ್ಷೋದ್ಯಾನ ನಿರ್ಮಾಣ
• ಸಂಚಾರ ದಟ್ಟಣೆ ನಿಯಂತ್ರಣಕ್ಕೆ 3 ಕಡೆ ಮೇಲ್ಸೇತುವೆ
• ಜಯದೇವ-ಕೆಸಿ ಜನರಲ್ ಆಸ್ಪತ್ರೆಗಳ ಅಭಿವೃದ್ದಿಗೆ 20 ಕೋಟಿ ರೂ.
• ಹೆಸರಘಟ್ಟದಲ್ಲಿ ಥೀಮ್ ಪಾರ್ಕ್ ನಿರ್ಮಾಣ
• ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ “ಬೆಂಗಳೂರು ಮಿಷನ್ 2022”
• ಮಲ್ಲೇಶ್ವರಂ ನಲ್ಲಿ ಕರ್ನಾಟಕ ಸಾಂಸ್ಕ್ರತಿಕ ಕೇಂದ್ರ ಸ್ಥಾಪನೆ
• ಅಂತರ್ಜಲ ಅಭಿವೃದ್ದಿಗೆ ಬೆಂಗಳೂರಿನಲ್ಲಿ ಕೆರೆ ತುಂಬಿಸುವ ಯೊಜನೆ
• ಬೆಂಗಳೂರಿನವರಿಗೆ ಹೈ ಸ್ಪೀಡ್ ರೈಲ್ ವ್ಯವಸ್ಥೆ
• ನೈಸರ್ಗಿಕ ಪಥ-ಮಕ್ಕಳ ಆಟೋಟಕ್ಕೆ ಮೈದಾನಗಳ ನಿರ್ಮಾಣ
• ಬಿಬಿಎಂಪಿಯ 57 ವಾರ್ಡ್ ಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಜನಾರೋಗ್ಯ ಕೇಂದ್ರ ಸ್ಥಾಪನೆ
• ಬೆಂಗಳೂರಿನ 3 ಕಡೆ ಟ್ರೀ ಪಾರ್ಕ್ ನಿರ್ಮಾಣ
• ಸಿಂಗೇನ ಅಗ್ರಹಾರದಲ್ಲಿ ಹಣ್ಣು ಮಾರುಕಟ್ಟೆ ಅಭಿವೃದ್ದಿ
• ಬೆಂಗಳೂರಿನ ತ್ಯಾಜ್ಯ ವಿಲೇವಾರಿಗೆ ಕಂಪನಿ ರಚನೆ -ಹಣದ ನೆರವು
• ಬೈಯ್ಯಪ್ಪನಹಳ್ಳಿಯಲ್ಲಿ 3 ಎಕರೆಯಲ್ಲಿ ಹೂವಿನ ಮಾರುಕಟ್ಟೆಗಾಗಿ 50 ಕೋಟಿ ರೂ.
• “ನಿರ್ಭಯಾ” ಯೋಜನೆ ಅಡಿ ಬೆಂಗಳೂರು ನಗರದಲ್ಲಿ 7500 ಸಿಸಿ ಕ್ಯಾಮೆರಾ ಅಳವಡಿಕೆ, ಇ-ಬೀಟ್ ತಂತ್ರಙ್ಞನ ಮೂಲಕ ರಾತ್ರಿ ಗಸ್ತು ತೀವ್ರಗೊಳಿಸಲು ಕ್ರಮ.
• ಬೆಂಗಳೂರು ಮುಂಬೈ-ಚೆನ್ನೈ ಕಾರಿಡಾರ್ ನಲ್ಲಿ ಕೈಗಾರಿಕಾ ಟೌನ್ ಶಿಪ್
• ಬೆಂಗಳೂರನ್ನು ಜಿಯೋಸ್ಪೇಷಿಯಲ್ ಹಬ್ ನ್ನಾಗಿಸಲು ಯೋಜನೆ
• ಬೆಂಗಳೂರಿನ ವಾಹನದಟ್ಟಣೆಗೆ ಬ್ರೇಕ್ ಹಾಕಲು ಉಪನಗರ ರೈಲು ಯೋಜನೆಗೆ 850 ಕೋಟಿ ರೂ. ಅನುದಾನ
• ಕೆಂಪೇಗೌಡ ಏರ್ ಪೋರ್ಟ್ 2ನೇ ಟರ್ಮಿನಲ್ ಗೆ 4,751 ಕೋಟಿ ರೂ.
• ಕೆಂಪೇಗೌಡ ಏರ್ ಪೋರ್ಟ್ ಪಕ್ಕ ಬೆಂಗಳೂರು ಸಿಗ್ನೇಚರ್ ಬಿಸ್ನೆಸ್ ಪಾರ್ಕ್
• ಬಿಬಿಎಂಪಿ-ಜಲಮಂಡಳಿಗೆ ಎಸ್ ಟಿಪಿಗಳ ಉನ್ನತೀಕರಣಕ್ಕೆ 450 ಕೋಟಿ ರೂ.
• 41 ಕಿ.ಮೀ ಬೆಂಗಳೂರು ಮೆಟ್ರೋ ಕಾಮಗಾರಿ ಪೂರ್ಣಕ್ಕೆ 30,000 ಕೋಟಿ
• ಮೆಟ್ರೋ-ಬಿಎಂಟಿಸಿ ಬಳಕೆಗೆ “ಒಂದು ರಾಷ್ಟ್ರ ಒಂದು ಕಾರ್ಡ್”ಅನುಷ್ಟಾನ
• ಬಿಎಂಟಿಸಿ ಟಿಕೆಟಿಂಗ್ ವ್ಯವಸ್ಥೆ ಆಧುನೀಕರಣಕ್ಕೆ ಕ್ರಮ
• ಬೆಂಗಳೂರಿನ ಉತ್ತರ ಭಾಗದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
• ಅಂಗಾಂಗ ಕಸಿ ಸೌಲಭ್ಯಕ್ಕೆ 20 ಹಾಸಿಗೆ ಸಾಮರ್ಥ್ಯದ 28 ಕೋಟಿ ರೂ. ವೆಚ್ಚದ ಆಸ್ಪತ್ರೆ
• ಬೆಂಗಳೂರಿನ ನಗರವಾಸಿಗಳ ಆರೋಗ್ಯರಕ್ಷಣೆಗೆ 10 ಕೋಟಿ ರೂ. ವೆಚ್ಚದ ಜನಾರೋಗ್ಯ ಕೇಂದ್ರ
• ಬಡಮಕ್ಕಳ ಗುಣಮಟ್ಟದ ಶಿಕ್ಷಣ ನೀಡಲು 33 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ಶಾಲೆಗಳ ಅಭಿವೃದ್ದಿ
• ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಕಲೆ-ಸಂಸ್ಜ್ರತಿ ಪ್ರೋತ್ಸಾಹಕ್ಕೆ 2 ಕೋಟಿ ರೂ.
• ದೇವನಹಳ್ಳಿಯಲ್ಲಿ ಕ್ರೀಡೆಗಳ ಪ್ರೋತ್ಸಾಹಕ್ಕೆ ಮಿಷನ್ ಓಲಂಪಿಕ್ಸ್
•
• 2022ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ವಿಶ್ವವಿದ್ಯಾನಿಲಯ ಕ್ರೀಡಾಕೂಟ
•
• ಜಕ್ಕೂರು ವೈಮಾನಿಕ ಶಾಲೆ ಅಭಿವೃದ್ದಿಗೆ 2 ಕೋಟಿ ರೂ.
• ಬೆಂಗಳೂರು ಸುತ್ತಮುತ್ತಲ ಪ್ರವಾಸಿ ಸ್ಥಳಗಳಿಗೆ “ವಾರಾಂತ್ಯ ಪ್ರವಾಸ”
• ಕೋರಮಂಗಲ ಕಣಿವೆ ಪ್ರವಾಸಿ ಆಕರ್ಷಣೀಯ ತಾಣವಾಗಿ ಅಭಿವೃದ್ಧಿಪಡಿಸಲು 169 ಕೋಟಿ ರೂ. ವೆಚ್ಚದಲ್ಲಿ ಕೋರಮಂಗಲ ಕಣಿವೆ ರಾಜಕಾಲುವೆ ಅಭಿವೃದ್ಧಿ ಮತ್ತು ನಿರ್ವಹಣೆ ಯೋಜನೆ ಅನುಷ್ಠಾನ
• ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ ವತಿಯಿಂದ ಬಿಬಿಎಂಪಿ ಸಹಯೋಗದೊಂದಿಗೆ 450 ಕೋಟಿ ವೆಚ್ಚದಲ್ಲಿ ಕೆಸಿ ವ್ಯಾಲಿ ಆವರಣದ 248 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿ ಪುನರುಜ್ಜೀವನ. ಹಾಗೂ ಉನ್ನತೀಕರಣಕ್ಕೆ ಕ್ರಮ.