ಗೋವಾ ಎಂಬ ಪ್ರವಾಸಿಗರ ಸ್ವರ್ಗ ಕರೋನಾ ಹೊಡೆತಕ್ಕೆ ಸಿಲುಕಿ ಇಲ್ಲಿನ ಪ್ರವಾಸೋದ್ಯಮ ನಲುಗಿದೆ. ನಿಜ. ಆದರೆ ಇಲ್ಲಿನ ತರೇಹವಾರಿ ಆಕರ್ಷಕ ಬೀಚ್ ಗಳು, ಪ್ರಕೃತಿ ಸೌಂದರ್ಯ, ಪ್ರವಾಸಿ ಕೇಂದ್ರಗಳು, ಚರ್ಚ್, ನೈಟ್ ಲೈಫ್ ಪ್ರತಿಯೊಂದನ್ನು ಪ್ರವಾಸಿಗರು ಮೆಚ್ಚುತ್ತಾರೆ. ನಿಧಾನವಾಗಿ ಗೋವಾದ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೊಳ್ಳುವ ಹಾದಿ ಹಿಡಿದಿದೆ.





























