ಬೆಂಗಳೂರು, ಮಾ.20 www.bengaluruwire.com: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಬೆಸ್ಕಾಂ ಮಹತ್ವದ ಮುನ್ನೆಚ್ಚರಿಕಾ ಕ್ರಮಗಳನ್ನು ಪ್ರಕಟಿಸಿದೆ. ಗಾಳಿ-ಮಳೆಯ ಸಂದರ್ಭದಲ್ಲಿ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಜನರು ಜಾಗರೂಕರಾಗಿರಬೇಕು ಎಂದು ಸಂಸ್ಥೆ ಮನವಿ ಮಾಡಿದೆ.
ಗಾಳಿ-ಮಳೆಗೆ ವಿದ್ಯುತ್ ಕಂಬಗಳು ವಾಲುವುದು ಅಥವಾ ಮರದ ಕೊಂಬೆಗಳು ತಂತಿಗಳ ಮೇಲೆ ಬೀಳುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ತಂತಿ ಅಥವಾ ಕಂಬಗಳ ಹತ್ತಿರ ಹೋಗಬಾರದು. ತುಂಡಾದ ತಂತಿಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಬೆಸ್ಕಾಂ ಕಚೇರಿ ಅಥವಾ 1912 ಸಹಾಯವಾಣಿಗೆ ಕರೆ ಮಾಡಬೇಕು.
ವಾಟ್ಸ್ ಆಪ್ ಮೂಲಕ ದೂರು ನೀಡಿ:
ಮಳೆಯ ಸಮಯದಲ್ಲಿ 1912 ಸಹಾಯವಾಣಿಗೆ ಕರೆಗಳ ಒತ್ತಡ ಹೆಚ್ಚಿರುವುದರಿಂದ, ಪರ್ಯಾಯವಾಗಿ ಜಿಲ್ಲಾವಾರು ವಾಟ್ಸ್ ಆಪ್ ಸಂಖ್ಯೆಗಳನ್ನು ಬೆಸ್ಕಾಂ ಬಿಡುಗಡೆ ಮಾಡಿದೆ. ಗ್ರಾಹಕರು ತಮ್ಮ ಸಮಸ್ಯೆಯ ಫೋಟೋ ಅಥವಾ ವಿಡಿಯೋಗಳನ್ನು ಈ ಕೆಳಗಿನ ಸಂಖ್ಯೆಗಳಿಗೆ ಕಳುಹಿಸಿ ತ್ವರಿತವಾಗಿ ಪರಿಹಾರ ಪಡೆಯಬಹುದು.

ಜಿಲ್ಲಾವಾರು ವಾಟ್ಸ್ ಆಪ್ ಸಹಾಯವಾಣಿ ಸಂಖ್ಯೆಗಳು:
* ಬೆಂಗಳೂರು ನಗರ: ದಕ್ಷಿಣ (8277884011), ಪಶ್ಚಿಮ (8277884012), ಪೂರ್ವ (8277884013), ಉತ್ತರ (8277884014)
* ಕೋಲಾರ: 8277884015
* ಚಿಕ್ಕಬಳ್ಳಾಪುರ: 8277884016
* ಬೆಂಗಳೂರು ಗ್ರಾಮಾಂತರ: 8277884017
* ರಾಮನಗರ: 8277884018
* ತುಮಕೂರು: 8277884019
* ಚಿತ್ರದುರ್ಗ: 8277884020
* ದಾವಣಗೆರೆ: 8277884021
ಮಳೆ ಸುರಿಯುವಾಗ ವಿದ್ಯುತ್ ಕಂಬಗಳು ಅಥವಾ ಪರಿವರ್ತಕಗಳ (Transformers) ಹತ್ತಿರ ನಿಲ್ಲಬಾರದು ಎಂದು ಬೆಸ್ಕಾಂ ಕಟ್ಟುನಿಟ್ಟಿನ ಸೂಚನೆ ನೀಡಿದೆ.




















