ಬೆಂಗಳೂರು, ಮಾ.09 www.bengaluruwire.com: ಸಿಲಿಕಾನ್ ಸಿಟಿಯ ಅಭಿವೃದ್ಧಿಯ ಹರಿಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಈಗ 50ರ ಸಂಭ್ರಮದಲ್ಲಿದೆ.
ಈ ಐತಿಹಾಸಿಕ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು ಬಿಡಿಎ ತನ್ನ ಗುರುತನ್ನು (Identity) ಹೊಸ ರೂಪದಲ್ಲಿ ಪ್ರಸ್ತುತಪಡಿಸಲು ಮುಂದಾಗಿದ್ದು, ಸಾರ್ವಜನಿಕರಿಗಾಗಿ ‘ಲೋಗೋ ಮತ್ತು ಟ್ಯಾಗ್ ಲೈನ್ ವಿನ್ಯಾಸ’ ಸ್ಪರ್ಧೆಯನ್ನು ಆಯೋಜಿಸಿದೆ.
ಪ್ರಾಧಿಕಾರದ ಭವಿಷ್ಯದ ದೃಷ್ಟಿಕೋನ, ಪಾರದರ್ಶಕತೆ ಮತ್ತು ಸುಸ್ಥಿರ ನಗರಾಭಿವೃದ್ಧಿಯನ್ನು ಪ್ರತಿಬಿಂಬಿಸುವ ವಿನ್ಯಾಸಕ್ಕೆ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಲಾಗಿದೆ.
ಸ್ಪರ್ಧೆಯ ಪ್ರಮುಖ ಅಂಶಗಳು:

ಅರ್ಹತೆ: 18 ವರ್ಷ ಮೇಲ್ಪಟ್ಟ ಎಲ್ಲಾ ಕನ್ನಡಿಗರು, ಡಿಸೈನ್ ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಸಂಸ್ಥೆಗಳು ಭಾಗವಹಿಸಬಹುದು.
ಬಹುಮಾನ: ಅತ್ಯುತ್ತಮ ಲೋಗೋ ಮತ್ತು ಟ್ಯಾಗ್ ಲೈನ್‌ಗೆ ₹1,00,000 ನಗದು ಬಹುಮಾನ (TDS ಅನ್ವಯ).
ವಿನ್ಯಾಸದ ಮಾನದಂಡ: ಲೋಗೋ ಸ್ಮಾರ್ಟ್ ಸಿಟಿ ಮತ್ತು ಯೋಜಿತ ನಗರಾಭಿವೃದ್ಧಿಯನ್ನು ಪ್ರತಿಬಿಂಬಿಸಬೇಕು. ಟ್ಯಾಗ್ ಲೈನ್ ಗರಿಷ್ಠ 8 ಪದಗಳ ಮಿತಿಯಲ್ಲಿದ್ದು, ಕನ್ನಡ ಅಥವಾ ಇಂಗ್ಲಿಷ್‌ನಲ್ಲಿರಬಹುದು.
ನಿರ್ಬಂಧ: ಎಐ (AI) ಮೂಲಕ ಸೃಷ್ಟಿಸಿದ ಅಥವಾ ನಕಲು ಮಾಡಿದ ವಿನ್ಯಾಸಗಳಿಗೆ ಅವಕಾಶವಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?:
ಆಸಕ್ತರು ತಮ್ಮ ವಿನ್ಯಾಸಗಳನ್ನು JPEG, PNG ಅಥವಾ PDF ರೂಪದಲ್ಲಿ ಬಿಡಿಎ ಅಧಿಕೃತ ವೆಬ್‌ಸೈಟ್ https://bdakarnataka.in/ ಮೂಲಕ ಮಾರ್ಚ್ 24, 2026ರ ಒಳಗೆ ಸಲ್ಲಿಸಬೇಕು. ಆಯ್ಕೆಯಾದ ವಿನ್ಯಾಸವು ಬಿಡಿಎನ ಅಧಿಕೃತ ದಾಖಲೆಗಳು, ಲೇಔಟ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಬಳಕೆಯಾಗಲಿದೆ.



















