Mahakumbha 2025 |BW -3 | ಸೆಕ್ಟರ್- 20 ನಾಗ… ನಮನ

ಕುಂಭನಗರ (ಪ್ರಯಾಗ್ ರಾಜ್) ಜ.28 www.bengaluruwire.com : ಎಲ್ಲರಲ್ಲೂ ಒಂದು ರೀತಿಯ ಕುತೂಹಲ, ವಿಸ್ಮಯ ಹಾಗೂ ಒಂದಿಷ್ಟು ಭಯವನ್ನೂ ಹುಟ್ಟಿಸುವವರೇ ಈ ನಾಗಾ ಬಾಬಾಗಳು. ಕುಂಭಮೇಳದ ಸೆಕ್ಟರ್ 20ನಲ್ಲಿನ ಅಖಾಡಗಳಲ್ಲಿ ಬೀಡು ಬಿಟ್ಟಿರುವ ನಾಗಾ ಬಾಬಾಗಳನ್ನು ಮಾತಾಡಿಸುವುದು ಸ್ವಲ್ಪ ಆತಂಕಕಾರಿಯೇ… ಹೀಗಿದ್ದರೂ ಧೈರ್ಯಮಾಡಿ ಅವರನ್ನು ಮಾತನಾಡಿಸಿದೆವು. ನಮ್ಮೊಂದಿಗೆ ಸಮಾಧಾನದಿಂದಲೇ ವರ್ತಿಸಿದ ನಾಗಾ ಬಾಬಾಗಳು, ಫೋಟೋ, ವಿಡಿಯೋಗಳನ್ನೂ ತೆಗೆಯಲು ಬಿಟ್ಟರು. ಉರಿಯುತ್ತಿದ ಬೆಂಕಿಯ ಮುಂದೆ ಎಂತದನ್ನೋ ಸೇದುತ್ತಿದ್ದ ನಾಗಾ ಬಾಬಾಗಳನ್ನು ನೋಡಿ, ಮಾತನಾಡಿ ಆಶೀರ್ವಾದ ಪಡೆದು ಮುನ್ನಡೆದೆವು….!!