Mahakumbh 2025 | BW-1 | ಮಹಾಕುಂಭ ಮೇಳದಲ್ಲಿ ಪ್ರತ್ಯಕ್ಷ ವರದಿಗೆ ಸಾಕ್ಷಿಯಾಗುತ್ತಿದೆ ಬೆಂಗಳೂರು ವೈರ್ : ಬೆಂಗಳೂರಿಂದ ಆರಂಭವಾದ ಪ್ರಯಾಣ

ಬೆಂಗಳೂರು, ಜ.25 www.bengaluruwire.com : ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾ ಕುಂಭಮೇಳ (Mahakumbh Mela)ವು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ (Prayagraj)ನಲ್ಲಿ ಜನವರಿ 13ರಿಂದ ಆರಂಭವಾಗಿದ್ದು, ಫೆಬ್ರವರಿ 26 ರವರೆಗೆ ನಡೆಯಲಿದೆ.  ಇದರ ವರದಿಗಾಗಿ ಬೆಂಗಳೂರಿನಿಂದ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿನ ತ್ರಿವೇಣಿ ಸಂಗಮ ಸ್ಥಳಕ್ಕೆ ತೆರಳಿ ವೀಕ್ಷಕರಿಗೆ ಉತ್ತಮ ವರದಿಗಳನ್ನು ನೀಡುವ ಉದ್ದೇಶದಿಂದ ಬೆಂಗಳೂರು ವೈರ್ ಪ್ರತಿನಿಧಿ ರಾಜಧಾನಿಯಿಂದ 2341 ಕಿ.ಮೀ ದೂರ ರೈಲಲ್ಲಿ ಪ್ರಯಾಣ ಮಹಾಕುಂಭ ಮೇಳ-2025ರ ಪ್ರತ್ಯಕ್ಷ ವರದಿಯನ್ನು ನಿಮಗೆ ನೀಡಲಿದೆ.