ಜಮ್ಮು, ಏ.15 www.bengaluruwire.com : ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಅಮರನಾಥ ದೇಗುಲಕ್ಕೆ ವಾರ್ಷಿಕ ತೀರ್ಥಯಾತ್ರೆ ಜೂನ್ 29 ರಿಂದ ಪ್ರಾರಂಭವಾಗಿ ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ (SASB) ತಿಳಿಸಿದೆ.
52 ದಿನಗಳ ಯಾತ್ರೆಗೆ ಮುಂಗಡ ನೋಂದಣಿಯನ್ನು ಏಪ್ರಿಲ್ 15 ರಂದು (ಇಂದಿನಿಂದ) ತೆರೆಯಲಾಗುವುದು ಎಂದು ಮಂಡಳಿಯು ಪ್ರಕಟಿಸಿದೆ.
ವಾರ್ಷಿಕ ಯಾತ್ರೆಯು ಎರಡು ಮಾರ್ಗಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48 ಕಿ.ಮೀ ದೂರದ ನುನ್ವಾನ್ -ಪಹಲ್ಗಾಮ್ ಮಾರ್ಗ ಮತ್ತು ಗಂದರ್ಬಾಲ್ ಜಿಲ್ಲೆಯ ಬಾಲ್ಟಾಲ್ ಮಾರ್ಗ 14 ಕಿ.ಮೀ ನಷ್ಟಿದ್ದು ಕಡಿಮೆ, ಆದರೆ ಕಡಿದಾದ ಮಾರ್ಗವಾಗಿದೆ.
ಅಮರನಾಥ ಯಾತ್ರೆಯು ಪ್ರತಿ ವರ್ಷವೂ ‘ಜುಲೈ ಆಗಸ್ಟ್‌ನಲ್ಲಿ (ಹಿಂದೂ ಕ್ಯಾಲೆಂಡರ್‌ನಲ್ಲಿ ಶ್ರಾವಣ ಮಾಸ) ಶ್ರಾವಣಿ ಮೇಳದ ಸಮಯದಲ್ಲಿ ಅಮರನಾಥ ಗುಹೆಗೆ ಭೇಟಿಗೆ ಲಕ್ಷಗಟ್ಟಲೆ ಯಾತ್ರಾರ್ಥಿಗಳಿಗೆ ಅವಕಾಶವಿರುತ್ತದೆ. ಭೌಗೋಳಿಕ ಪರಿಸ್ಥಿತಿಗಳಿಂದಾಗಿ ವರ್ಷದಲ್ಲಿ ಈ ಅವಧಿಯಲ್ಲಿ ಗುಹೆಯನ್ನು ಭಕ್ತರು ಪ್ರವೇಶಿಸಬಹುದು.
ಏತನ್ಮಧ್ಯೆ, ವಾರ್ಷಿಕ ಅಮರನಾಥ ಯಾತ್ರೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ತೀರ್ಥಯಾತ್ರೆ ಹಿನ್ನಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್ NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್ SDRF) ಸಿಬ್ಬಂದಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪರ್ವತ ರಕ್ಷಣಾ ತಂಡಗಳ (ಎಂಆರ್‌ಟಿ) ಭಾಗವಾಗಿ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಭಕ್ತರ ಸುರಕ್ಷತೆ ಮತ್ತು ಅನುಕೂಲತೆಯನ್ನು ಖಾತರಿ ಪಡಿಸಿಕೊಳ್ಳಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್ (SASB) ಪ್ರಪಂಚದಾದ್ಯಂತದ ಭಕ್ತರಿಗೆ ಬೆಳಿಗ್ಗೆ ಮತ್ತು ಸಂಜೆ ಆರತಿ (ಪ್ರಾರ್ಥನೆಗಳು) ನೇರ ಪ್ರಸಾರವನ್ನು ಸಕ್ರಿಯಗೊಳಿಸುತ್ತದೆ. ಅಮರನಾಥ ಯಾತ್ರೆಯ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಯಾತ್ರೆ ಮತ್ತು ಹವಾಮಾನದ ಬಗ್ಗೆ ಹಾಗೂ ಅಲ್ಲಿನ ನೈಜ ಸಮಯದ ಮಾಹಿತಿಯನ್ನು ಪಡೆಯಲು ಮತ್ತು ಆನ್‌ಲೈನ್‌ನಲ್ಲಿ ಹಲವಾರು ಸೇವೆಗಳನ್ನು ಪಡೆಯಲು ಲಭ್ಯವಾಗುವಂತೆ ಅವಕಾಶ ಕಲ್ಪಿಸಲಾಗಿದೆ.
ಸಮುದ್ರ ಮಟ್ಟದಿಂದ 12,756 ಅಡಿ ಎತ್ತರದಲ್ಲಿ ರಾಜಧಾನಿ ಶ್ರೀನಗರದಿಂದ 141 ಕಿಮೀ ದೂರದಲ್ಲಿರುವ ಅಮರನಾಥದ ಪವಿತ್ರ ಗುಹೆಯು ಲಾಡರ್ ಕಣಿವೆಯಲ್ಲಿದೆ. ಇದು ಹಿಮನದಿಗಳು ಮತ್ತು ವರ್ಷದ ಹೆಚ್ಚಿನ ಕಾಲ ಹಿಮದಿಂದ ಆವೃತವಾದ ಪರ್ವತಗಳಿಂದ ಕೂಡಿದೆ.