ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್‌ನ (NASA) ಇನ್ ಸ್ಟಾಗ್ರಾಂ (Instagram) ಖಾತೆಯು ಬಾಹ್ಯಾಕಾಶ ಸಂಶೋಧನೆ, ಖಗೋಳಶಾಸ್ತ್ರ ಮತ್ತು ಆಕಾಶದ ಎಲ್ಲಾ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಯಾರಿಗಾದರೂ ಒಂದು ಮಹತ್ವಪೂರ್ಣ ಮೂಲವಾಗಿದೆ. ನಿಸ್ಸಂದೇಹವಾಗಿ, ನಾಸಾ ಯಾವಾಗಲೂ ಹೊಸದನ್ನು ಅನ್ವೇಷಿಸುವ ತುಡಿತ ಹೊಂದಿದೆ ಮತ್ತು ಬಾಹ್ಯಾಕಾಶದಲ್ಲಿ ಅಪರೂಪದ ಘಟನೆಗಳನ್ನು, ಚಿತ್ರಗಳನ್ನು ಸೆರೆಹಿಡಿಯುತ್ತಾ ಜನರನ್ನು ಆಕರ್ಷಿಸುತ್ತಾ ಬಂದಿದೆ. ಇದು ಬಾಹ್ಯಾಕಾಶದ ವಿಶಾಲತೆಯ ನೋಟವನ್ನು ನೀಡುತ್ತದೆ. ಇಂತಹ ಸನ್ನಿವೇಶನಗಳು ನಿಜಕ್ಕೂ ಕಣ್ಣಿಗೆ ಹಬ್ಬವಾಗಿದೆ.
ಮತ್ತೊಮ್ಮೆ ನಾಸಾ ಸಂಸ್ಥೆಯು ಭೂಮಿಯಿಂದ 30,000 ಬೆಳಕಿನ ವರ್ಷಗಳ ದೂರದಲ್ಲಿರುವ (Light-years away from the Earth) ನಕ್ಷತ್ರಗಳ ಬೆರಗುಗೊಳಿಸುವ ಸಂಗ್ರಹದ ಉಸಿರುಕಟ್ಟುವ ವಿಡಿಯೊವನ್ನು ಹಂಚಿಕೊಂಡಿದೆ. ಈ ವಿಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣ, ಅದು ವೈರಲ್ ಆಗಿದ್ದು, ಸಾವಿರಾರು ನೆಟ್ಟಿಗರನ್ನು ಸೆಳೆದಿದೆ ಮತ್ತು ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ. ಹೌದು ನಾಸಾದ ಹಬಲ್ ಸ್ಪೇಸ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಂತೆ ಪೋಸ್ಟ್‌ನ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ, “ಲಿಲ್ಲರ್ 1 ಒಂದು ಗೋಳಾಕಾರದ ಕ್ಲಸ್ಟರ್. ಗುರುತ್ವಾಕರ್ಷಣೆಯಿಂದ ಒಟ್ಟಿಗೆ ಹಿಡಿದಿರುವ ನಕ್ಷತ್ರಗಳ ಸ್ಥೂಲವಾದ ಗೋಳಾಕಾರದ ಗುಂಪು. ಆದಾಗ್ಯೂ, ಈ ರೀತಿಯ ಹೆಚ್ಚಿನ ಸಮೂಹಗಳು ಹಳೆಯ ನಕ್ಷತ್ರಗಳಿಗೆ ನೆಲೆಯಾಗಿದೆ. ಲಿಲ್ಲರ್ 1 (Liller-1) ಗಮನಾರ್ಹವಾಗಿ ವಿಭಿನ್ನ ವಯಸ್ಸಿನ ನಕ್ಷತ್ರಗಳ ಎರಡು ಸಂಖ್ಯೆಯನ್ನು ಆಯೋಜಿಸಿದೆ. ಈ ನಕ್ಷೆಗಳ ಕಿರಿಯ ವಯಸ್ಸು ಕೇವಲ 1 ರಿಂದ 2 ಶತಕೋಟಿ ವರ್ಷಗಳು ಮತ್ತು ಹಳೆಯ ನಕ್ಷೆತ್ರಗಳ ವಯೋಮಾನ ಸುಮಾರು 12 ಶತಕೋಟಿ ವರ್ಷಗಳು ಎಂದು ನಾಸಾ ಹೇಳಿದೆ. ಇದರರ್ಥ ಲಿಲ್ಲರ್ 1 ಅಸಾಧಾರಣವಾಗಿ ದೀರ್ಘಾವಧಿಯಲ್ಲಿ ನಕ್ಷತ್ರಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ.”
ಈ ಪೋಸ್ಟ್ ಅನ್ನು ಮೂರು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಅದನ್ನು ಹಂಚಿಕೊಂಡ ನಂತರ, ಇದು ಅಪಾರವಾಗಿ ವೈರಲ್ ಆಗಿದೆ. ಇಲ್ಲಿಯವರೆಗೆ, ಇದು ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 27,500 ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ. ಈ ಹಂಚಿಕೆಯು ಜನರನ್ನು ಆಕರ್ಷಿಸಿದೆ ಮತ್ತು ಅವರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳಲು ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ವಿಡಿಯೋ ಕ್ಲಿಪ್ ಅನ್ನು ಪ್ರಭಾವಶಾಲಿ ಎಂದು ಕರೆದರು ಮತ್ತು ಅಂತಹ ಅದ್ಭುತ ಸೆರೆಹಿಡಿಯುವಿಕೆಗಾಗಿ ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಆದರೆ ಇತರರು, ಇಂದಿನ ಮಕ್ಕಳು ವಿಜ್ಞಾನ ಪುಸ್ತಕಗಳಿಗಿಂತ ಬ್ರಹ್ಮಾಂಡದ ಬಗ್ಗೆ ಅಂತಹ ಹತ್ತಿರದ ನೋಟ ಮತ್ತು ಜ್ಞಾನವನ್ನು ಪಡೆಯಲು ಎಷ್ಟು ಅದೃಷ್ಟವಂತರು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.