ಬೆಂಗಳೂರು, ಏ.12 www.bengaluruwire.com : ನಮ್ಮ ಮೆಟ್ರೊ ಪ್ರಯಾಣಿಕರ ತೃಪ್ತಿ ಸಮೀಕ್ಷೆ (Metro Passenger Satisfaction Survey)ಯನ್ನು ‘ಕಾಮೆಟ್ ನೊವಾ’ ಸಂಸ್ಥೆಯು ಏ.8ಕ್ಕೆ ಆರಂಭಿಸಿದ್ದು, ಮೇ 6ರವರೆಗೆ ನಡೆಯಲಿದೆ.
ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸಲು ಮತ್ತು ನಮ್ಮ ಮೆಟ್ರೊ ಕಾರ್ಯಕ್ಷಮತೆ ಸೂಚಕಗಳನ್ನು ರೂಪಿಸಲು ಲಂಡನ್ನ ಇಂಪೀರಿಯಲ್ ಕಾಲೇಜು ಈ ಅಧ್ಯಯನ ನಡೆಸಲಿದೆ. ಈ ಸಮೀಕ್ಷೆಯು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ನಡೆಸಲಾಗುತ್ತದೆ. ಪ್ರಯಾಣಿಕರು ನಿಗಮದ ವೆಬ್ಸೈಟ್ (www.bmrc.co.in) ಪ್ರತಿಕ್ರಿಯೆ ಪುಟಗಳಲ್ಲಿ ಭಾಗವಹಿಸಬಹುದು.
‘ನಮ್ಮ ಮೆಟ್ರೊ’ ಅಧಿಕೃತ ಮೊಬೈಲ್ ಅಪ್ಲಿಕೇಶನ್ನಲ್ಲಿ, ರೈಲಿನಲ್ಲಿ ಮತ್ತು ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಪ್ರದರ್ಶಿಸ ಲಾಗಿದೆ. ಪ್ರಯಾಣಿಕರು ಸಮೀಕ್ಷೆಯಲ್ಲಿ ಭಾಗವಹಿಸಿ ಪ್ರತಿಕ್ರಿಯೆ ನೀಡಬಹುದು” ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮಾಹಿತಿಗೆ: [email protected] ಅಥವಾ 1800-425-12345 ಸಂಪರ್ಕಿಸಬಹುದಾಗಿದೆ.