ನೀವು ಬೇರೆಯವರಿಗೆ ಹಣ ನೀಡಲು ಅಥವಾ ಹಣ ಪಡೆಯಲು ಯುಪಿಐ (UPI) ಅಥವಾ ಭೀಮ್ (BHIM) ಆಪ್ ಬಳಸುತ್ತಿದ್ದೀರಾ..? ಹಾಗಾದರೆ ನೀವು ಈ ಸುದ್ದಿಯನ್ನು ಮಿಸ್ ಮಾಡದೆ ಓದಿ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್, ಇಂಟರ್ ನೆಟ್ ಬಳಕೆ ಹೆಚ್ಚಾದಂತೆ ಸೈಬರ್ ಅಪರಾಧ (Cyber Crime) ಹೆಚ್ಚಾಗುತ್ತಿದೆ. ಸೈಬರ್ ಅಪರಾಧಿಗಳು, ನಿಮ್ಮ ಯುಪಿಐ ಹಾಗೂ ಭೀಮ್ ಆಪ್ ಗಳಿಗೆ ಪ್ರತ್ಯೇಕ ಪಿನ್ ಕೋಡ್ ಅನ್ನು ನೀವು ಹೊಂದಿದ್ದರೂ, ನಿಮ್ಮ ಮೊಬೈಲ್ ಸಂಖ್ಯೆಗೆ ಯುಪಿಐ ಅಥವಾ ಭೀಮ್ ಆಪ್ ಮುಖಾಂತರ ಹಣದ ವ್ಯವಹಾರ ಮಾಡಿದಾಗ ನಿಮಗೆ ಓಟಿಪಿ (One Time Password – OTP) ಬಂದರೂ ಎಷ್ಟೋ ಮಂದಿ ಬ್ಯಾಂಕ್ ಖಾತೆ ಹ್ಯಾಕ್ ಆಗಿ ಅವರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಸ್ಕ್ಯಾಮ್ ಮಾಡುವ ದುಷ್ಕರ್ಮಿಗಳು ಲಪಟಾಯಿಸುತ್ತಾರೆ.
ನಿಮ್ಮ ಮೊಬೈಲ್ ಅನ್ನು ಅಪರಿಚಿತರು ತಮ್ಮ ಕುಟುಂಬದವರಿಗೋ, ಸ್ನೇಹಿತರಿಗೋ ಅರ್ಜೆಂಟಾಗಿ ಕಾಲ್ ಮಾಡುತ್ತೇನೆಂದು ಮೊಬೈಲ್ ಕೇಳಿದಾಗ ಜಾಗರೂಕರಾಗಿ ಅವರಿಗೆ ನಿಮ್ಮ ಮೊಬೈಲ್ ಕೊಡದಿದ್ದರೆ ಉತ್ತಮ. ಏಕೆಂದರೆ ಆ ಅಪರಿಚಿತರು ನಿಮ್ಮ ಮೊಬೈಲ್ ಪಡೆದುಕೊಂಡು, ಯಾರಿಗೋ ಕಾಲ್ ಮಾಡಿದವರಂತೆ ನಟಿಸಿ, ನಿಮ್ಮ ಮೊಬೈಲ್ ಸಂಖ್ಯೆ ಪಡೆದುಕೊಂಡು *401* ಅಂತ ನಿಮ್ಮ ಮೊಬೈಲ್ ನಲ್ಲಿ ಟೈಪ್ ಮಾಡಿ ಅದರ ಪಕ್ಕದಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಡಯಲ್ ಮಾಡುತ್ತಾರೆ. ಹೀಗೆ ಒಮ್ಮೆ ಮಾಡಿದಾಗ ನಿಮ್ಮ ಮೊಬೈಲ್ ಗೆ ಬರುವ ಎಲ್ಲಾ ರೀತಿಯ ಕರೆಗಳು ಹಾಗೂ ಮೆಸೇಜ್ ಗಳು ನಿಮಗೆ ಅರಿವಿಲ್ಲದಂತೆ ಅವರಿಗೆ ಫಾರ್ವಡ್ ಆಗುತ್ತದೆ (ಅಂದರೆ ಆ ಕಾಲ್ ಹಾಗೂ ಮೆಸೇಜ್ ಗಳು ರೀಡೈರೆಕ್ಟ್ ಆಗುತ್ತವೆ). ಇದನ್ನೇ ಬಳಸಿಕೊಂಡು ಸೈಬರ್ ಅಪರಾಧಿಗಳು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ.
ನಿಮ್ಮ ಮೊಬೈಲ್ ಇಂತಹ ಖದೀಮರ ಕೈಗೆ ಸಿಲುಕಿ, ನಿಮ್ಮ ಕಾಲ್ ಅಥವಾ ಮೆಸೇಜ್ ಗಳು ಅವರಿಗೆ ಫಾರ್ವಡ್ ಆಗುತ್ತಿದೆಯಾ ಅಂತ ತಿಳಿದುಕೊಳ್ಳಲು, ನೀವು ನಿಮ್ಮ ಮೊಬೈಲ್ ನಿಂದ *#21# ಹೀಗೆಂದು ಟೈಪ್ ಮಾಡಿದರೆ ನಿಮ್ಮ ಕಾಲ್ ಹಾಗೂ ಮೆಸೇಜ್ ಗಳು ಬೇರೆಯವರಿಗೆ ಆಟೊಮೆಟಿಕ್ ಆಗಿ ಹೋಗುತ್ತಿದೆಯಾ ಎಂಬುದನ್ನು ತಿಳಿದುಕೊಳ್ಳಬಹುದು. ಒಂದೊಮ್ಮೆ ಅವುಗಳು ಫಾರ್ವಡ್ ಆಗುತ್ತಿದೆಯೆಂದಾದರೆ ನೀವು ನಿಮ್ಮ ಮೊಬೈಲ್ ನಿಂದ ##002# ಎಂದು ಟೈಪ್ ಮಾಡಿ ನಿಮ್ಮ ಮೊಬೈಲ್ ಗೆ ಬರುವ ಯಾವುದೇ ಕರೆ ಹಾಗೂ ಸಂದೇಶಗಳು ಆ ಅಪರಿಚಿತ ವ್ಯಕ್ತಿಗೆ ಅಥವಾ ತಂಡಕ್ಕೆ ಫಾರ್ವಡ್ ಆಗುವುದನ್ನು (Disable) ನಿಷ್ಕ್ರಿಯಗೊಳಿಸಬಹುದು. ಮಾಹಿತಿ ಕೃಪೆ : ಸೈಬರ್ ಡಿಟೆಕ್ಟೀವ್ಸ್