Friday, March 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

    Video News | ದೇವರಿಗೆ ಕೈಮುಗಿದು ‘ಕೈಕೊಟ್ಟ’ ಕಳ್ಳರು: ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರ ವಿಚಿತ್ರ ಭಕ್ತಿ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

World Culture Festival 2023 | ವಾಷಿಂಗ್ಟನ್ ಡಿಸಿಯಲ್ಲಿ ‘ವಿಶ್ವ ಸಾಂಸ್ಕೃತಿಕ ಉತ್ಸವ’ : 180 ರಾಷ್ಟ್ರಗಳ ಜನರಿಂದ ಉಕ್ರೇನ್ ಶಾಂತಿಗಾಗಿ ಪ್ರಾರ್ಥನೆ

ನಾಲ್ಕನೇ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಎರಡನೆಯ ದಿನವೂ ನೂರಾರು ಬಾವುಟಗಳು ಹಾರಾಡಿದವು. ಮತ್ತೊಮ್ಮೆ ಏಕತೆಯ ಭಾವವು ಎಲ್ಲೆಡೆ ರಾರಾಜಿಸಿತು. ಹಲವು ವರ್ಣರಂಜಿತ ಕಾರ್ಯಕ್ರಮಗಳು ಜರುಗಿತು.

by Bengaluru Wire Desk
October 1, 2023
in News Wire, Photo Gallery, Public interest
Reading Time: 2 mins read
0

ಬೆಂಗಳೂರು, ಅ.1 www.bengaluruwire.com : ಅಮೆರಿಕದ ವಾಷಿಂಗ್ಟನ್‌ (Washington DC) ಡಿಸಿಯ ನ್ಯಾಷನಲ್‌ ಮಾಲ್‌ನಲ್ಲಿ ಆಯೋಜಿಸಿರುವ ನಾಲ್ಕನೇ ‘ವಿಶ್ವ ಸಾಂಸ್ಕೃತಿಕ ಉತ್ಸವ’ (World Culture Festival)ದ 2ನೇ ದಿನವೂ ಅದ್ಧೂರಿಯಾಗಿ ಸಂಪನ್ನವಾಯಿತು. ಉತ್ಸವಕ್ಕೆ 180 ದೇಶಗಳಿಂದ ಆಗಮಿಸಿದ್ದ ಜನರು, ಉಕ್ರೇನ್‌ನಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿನೆ ಕೈಗೊಂಡರು.

ಉತ್ಸವದಲ್ಲಿ ಎರಡನೆಯ ದಿನವೂ ನೂರಾರು ಬಾವುಟಗಳು ಹಾರಾಡಿದವು. ಮತ್ತೊಮ್ಮೆ ಏಕತೆಯ ಭಾವವು ಎಲ್ಲೆಡೆ ರಾರಾಜಿಸಿತು. 180 ದೇಶಗಳಿಂದ ಬಂದಿದ್ದ ಜನರು ಒಬ್ಬರನ್ನೊಬ್ಬರು ಕಲೆತು, ನೃತ್ಯ, ಸಂಗೀತ ಮತ್ತು ಆಹಾರದೊಡನೆ ಜಗತ್ತಿನ ವಿವಿಧ ಸಂಸ್ಕೃತಿಗಳನ್ನು ಸಂಭ್ರಮಿಸಿದರು.

ಬೃಹತ್ ಪ್ರಮಾಣದಲ್ಲಿ ನಡೆದ ಈ ಉತ್ಸವವು ವಿಶ್ವವನ್ನು ಒಗ್ಗೂಡಿಸಲು ಹೊರಟಿರುವ ಭಾರತದ ಸಂಕಲ್ಪ ಶಕ್ತಿಯನ್ನು ಪ್ರತಿಬಿಂಬಿಸಿತು. ವಾಷಿಂಗ್ಟನ್ ಡಿಸಿ ನ್ಯಾಷನಲ್ ಮಾಲಿನ ಐತಿಹಾಸಿಕ ಲಿಂಕನ್ ಸ್ಮಾರಕದ ಎದುರು ಸಾವಿರಾರು ಜನ ತಮ್ಮ ತಮ್ಮ ಮ್ಯಾಟ್ ಹಾಸಿ ಯೋಗ ಮಾಡುವುದರೊಂದಿಗೆ 2ನೇ ದಿನದ ಉತ್ಸವಕ್ಕೆ ಚಾಲನೆ ಕೊಟ್ಟರು. ಅಲ್ಲಿ ನೆರೆದಿದ್ದ ಎಲ್ಲರಿಗೂ  ಶ್ರೀ ಶ್ರೀ ರವಿಶಂಕರ್ ಗುರೂಜಿ (Ravishankar Guruji) ಅವರು ಒಂದು ಉಸಿರಾಟ, ಯೋಗ ಮತ್ತು ಧ್ಯಾನದ ಪ್ರಕ್ರಿಯೆಗಳನ್ನು ಹೇಳಿಕೊಟ್ಟರು. ಸಂಜೆಯ ವೇಳೆಗೆ ಮನಸೂರೆಗೊಳ್ಳುವಂತಹ ಪ್ರದರ್ಶನಗಳು ಜರುಗಿದವು.

ಗಣ್ಯರ ಸ್ಫೂರ್ತಿದಾಯಕ ಭಾಷಣಗಳು ಮನುಷ್ಯರ ಬಾಂಧವ್ಯಗಳನ್ನು ಇನ್ನಷ್ಟು ಬೆಸೆಯುವಂತಿತ್ತು. ಭಾರತದ ಮಾಜಿ ರಾಷ್ಟ್ರಪತಿಗಳಾದ ರಾಮ್‌ನಾಥ್ ಕೋವಿಂದ್ ಮಾತನಾಡಿ, “ಪರ್ವತ ಶ್ರೇಣಿಗಳು, ಕರಾವಳಿ ಬಯಲು, ನದಿಯ ತೀರ, ಮರುಭೂಮಿ ಪ್ರದೇಶ ಹೀಗೆ ಪ್ರಪಂಚದ ಮೂಲೆ ಮೂಲೆಗಳಿಂದ ಬಂದು ಜನರು ಇಲ್ಲಿ ಸೇರಿದ್ದಾರೆ. ಗುರುದೇವರು ಇಲ್ಲಿ ಒಂದು ಪುಟ್ಟ ಪ್ರಪಂಚವನ್ನೇ ನಿರ್ಮಿಸಿದ್ದಾರೆ” ಎಂದು ಬಣ್ಣಿಸಿದರು.

ಅನೇಕ ಕಲಾರೂಪಗಳ ಪ್ರದರ್ಶನಗಳು ನಡೆದವು. ಅವುಗಳಲ್ಲಿ ಪಾರಂಪರಿಕ ಉಕ್ರೇನ್‌ನ ಹಾಡಿನ ಪ್ರದರ್ಶನ ಕೂಡ ಒಂದು. ಇದನ್ನು ಉಕ್ರೇನ್ ಖ್ಯಾತ ಸಂಗೀತಗಾರರಾದ ಒಲೇನ ಅಸ್ತಶೇವ‌ ಅವರು ನಡೆಸಿಕೊಟ್ಟರು. ಯುದ್ಧದ ಕಾರಣದಿಂದಾಗಿ ಇವರು ತಮ್ಮ ಮಾತೃಭೂಮಿಯನ್ನು ತೊರೆದಿದ್ದರು. ಮನಕುಲಕುವ ಈ ಹಾಡಿನ ಪ್ರದರ್ಶನದ ನಂತರ ಜನರೆಲ್ಲರೂ ಸೇರಿ ಉಕ್ರೇನ್ ಶಾಂತಿಗಾಗಿ ಗುರುದೇವರ ಸಮ್ಮುಖದಲ್ಲಿ ಪ್ರಾರ್ಥಿಸಿದರು.

ಎಲ್ಲರನ್ನೂ ಎಚ್ಚರಿಸುವಂತೆ ಬಿರುಸಿನ ಭಾಷಣ ಮಾಡಿದ ರೆವರೆಂಡ್ ಜೆರಾಲ್ಡ್ ದುರ್ಲೆ, “ಆರ್ಟ್ ಆಫ್ ಲಿವಿಂಗ್‌ನ ಹೆಸರನ್ನು ಆರ್ಟ್ ಆಫ್ ಪ್ರೂಫ್ ಎಂದು ಬದಲಿಸಬೇಕು. ಏಕೆಂದರೆ ನಾವು ಎಲ್ಲರನ್ನೂ ಪ್ರೀತಿಸಬಹುದು. ನಾವು ಎಲ್ಲರೊಂದಿಗೆ ಹಂಚಿಕೊಳ್ಳಬಹುದು ಎಂದು ಗುರುದೇವರು ಪ್ರೂವ್ ಮಾಡಿದ್ದಾರೆ” ಎಂದರು.

ಅಮೆರಿಕದ ವೆಂಚರ್ ಕ್ಯಾಪಿಟಲ್ ಹೂಡಿಕೆದಾರರಾದ ಟಿಮ್ ಡ್ರೇಪರ್ ಮಾತನಾಡಿ, ಅಮೆರಿಕನ್ನರಾದ ನಾವು ಇತರ ಜನರನ್ನು ಅನ್ಯಲೋಕದವರಂತೆ ಕಂಡಿದ್ದೇವೆ. ಅದು ಒಳ್ಳೆಯ ಬೆಳವಣಿಗೆ ಆಗಿರಲಿಲ್ಲ. ಆದರೆ ಈಗ ಬದಲಾವಣೆ ಆರಂಭವಾಗಿದೆ. ಗುರುದೇವರ ನಾಯಕತ್ವದಲ್ಲಿ ಜನರನ್ನು ಒಂದಾಗಿ ತರುತ್ತಿದ್ದೇವೆ. ಈಗ ಭೂಮಿಯ ಮೇಲಿರುವ ಯಾರು ಕೂಡ ಏಲಿಯನ್ನರಲ್ಲ (ಅನ್ಯಗ್ರಹ ಜೀವಿಗಳು). ಆದರೆ ಈ ಭೂಮಿಯ ಮೇಲೆ ಯಾರಾದರೂ ಏಲಿಯನ್ನರು ಇದ್ದು, ನಿಮ್ಮ ನಾಯಕರ ಬಳಿಗೆ ಕರೆದೊಯ್ಯಿರಿ ಎಂದರೆ ನಾನು ಅವರನ್ನು ಗುರುದೇವ್ ಶ್ರೀ ಶ್ರೀ ರವಿಶಂಕರರ ಬಳಿಗೆ ಕರೆದೊಯ್ಯುತ್ತೇನೆ ಎಂದು ಹೇಳಿದರು.

ಮಾರಿಷಿಯಸ್‌ನ ಅಧ್ಯಕ್ಷರಾದ ಪೃಥ್ವಿರಾಜ್‌ ಸಿಂಗ್ ರೂಪನ್, ಜಪಾನಿನ ಮಾಜಿ ಪ್ರಧಾನ ಮಂತ್ರಿ ದಿವಂಗತ ಶಿಂಜೊ ಅಬೆಯವರ ಪತ್ನಿ ಅಕೀ ಅಬೆ, ಯುಎಸ್‌ನ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಇನ್ನಿತರ ಗಣ್ಯರು ಎರಡನೇ ದಿನ ಉಪಸ್ಥಿತರಾಗಿದ್ದರು.

ತರಹೇವಾರಿ ಸಾಂಸ್ಕೃತಿಕ ಉತ್ಸವ :

ಎರಡನೆಯ ದಿನ ಸಾಂಸ್ಕೃತಿಕ ಮಹೋತ್ಸವದಲ್ಲಿ, 10,000 ಜನರಿಂದ ಗರ್ಭ ನೃತ್ಯ ನಡೆಯಿತು. ಅವರೊಡನೆ ಗ್ರಾಮಿ ಪ್ರಶಸ್ತಿ ವಿಜೇತರಾದ ಭಾರತೀಯ ಅಮೆರಿಕನ್ನರೂ ಆದ ಫಾಲು ಶಾ ಅವರು ಗಾಯನ ಮಾಡಿದರು. 200 ಜನರನ್ನೊಳಗೊಂಡ ಭಾಂಗ್ರ ನೃತ್ಯ, ಐರಿಶ್‌ನ ಸ್ಟೆಪ್ ನೃತ್ಯ, ಆಫ್ಗಾನಿನ ಸುಮಧುರ ಸಂಗೀತ, 1,000 ಚೀನಿ ಅಮೆರಿಕನ್ನರಿಂದ ವೈಭವಯುತವಾದ ನೃತ್ಯ ಹಾಗೂ ಗಾಯನ ಜರುಗಿತು. ಇದರೊಡನೆ ಕುಂಗ್ ಫೂ ಪ್ರದರ್ಶನವೂ ನಡೆಯಿತು.

ಭವ್ಯವಾದ ಡ್ರಾಗನ್ ಮತ್ತು ಸಿಂಹಗಳು ಕಲಾತ್ಮಕ ಕಲ್ಪನೆಯನ್ನು ಜೀವಂತವಾಗಿಸಿದವು. ಇಂಡೊನೇಷಿಯಾ, ಬ್ರೆಜಿಲ್, ಬೊಲಿವಿಯ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳು ಅವಿಸ್ಮರಣೀಯವಾದ ನೃತ್ಯಗಳನ್ನು ನಡೆಸಿದವು. ಖ್ಯಾತ ಕುರ್ಟಿಸ್ ಬ್ಲೋ ಅವರ ನೇತೃತ್ವದಲ್ಲಿ ಹಿಪ್ ಹಾಪ್ ಮತ್ತು ಬ್ರೇಕ್ ಡಾನ್ಸ್‌ನ ಪ್ರದರ್ಶನ ನಡೆಯಿತು. 1,200 ಹಾಡುಗಾರರ ಗಾಸ್ಪೆಲ್ ಕಾಯರ್, ಪಾಕಿಸ್ತಾನದ ಮನಮೋಹಕ ಪ್ರದರ್ಶನವು ನಡೆಯಿತು.

ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಮಾತನಾಡಿ, ಇಂದಿನ ವಿಶ್ವ ಸಾಂಸ್ಕೃತಿಕ ಉತ್ಸವದಂತಹ ಉತ್ಸವಗಳು ಬಹಳ ಮುಖ್ಯ. ನಾವೆಲ್ಲರೂ ಪರಸ್ಪರ ಹೊಂದಿರುವ ಸಂಬಂಧವು ಎಷ್ಟು ಅವಶ್ಯಕವಾದದ್ದು ಎಂಬುದನ್ನು ಇದು ತೋರಿಸುತ್ತದೆ. ಇಂದಿನ ದಿನಗಳಲ್ಲಿ ಏಕಾಂಗಿತನ ಹಾಗೂ ಪ್ರತ್ಯೇಕತೆಯು ಹೆಚ್ಚಾಗಿದೆ. ಎಲ್ಲರೂ ಒಂದಾಗಿರುವ ಸಂಬಂಧಗಳನ್ನು ನೆನಪಿಸಿಕೊಳ್ಳುವುದು ಅವಶ್ಯಕವಾಗಿದೆ. ಏಕಾಂಗಿತನ, ಪ್ರತ್ಯೇಕತೆಯಿಂದ ದೈಹಿಕ ಕಾಯಿಲೆ, ಹೃದ್ರೋಗಗಳು ಹೆಚ್ಚುತ್ತಿವೆ. ಇವು ನಮ್ಮ ಸಮುದಾಯಗಳ ಒಳಿತನ್ನೇ ನಾಶಮಾಡುತ್ತಿವೆ ಎಂದು ತಿಳಿಸಿದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

ISRO Aditya L1 Mission | ಭೂ ಪ್ರಭಾವಳಿಯಿಂದ ಹೊರಬಂದು ಭೂಮಿ- ಸೂರ್ಯನ ಎಲ್1 ಬಿಂದುವಿನ ಕಡೆ ಪ್ರಯಾಣ ಬೆಳೆಸಿದ ಆದಿತ್ಯ ಎಲ್1 ನೌಕೆ

Next Post

Kappe Raaga Video News | ಮಳೆಕಾಡಿನ ‘ಕಪ್ಪೆರಾಗ’ ಕ್ಕೆ ಮನಸೋತು ಚಿತ್ರ ನಿರ್ದೇಶಕರ ಮುಡಿಗೇರಿತು ಗ್ರೀನ್ ಆಸ್ಕರ್!!

Next Post

Kappe Raaga Video News | ಮಳೆಕಾಡಿನ 'ಕಪ್ಪೆರಾಗ' ಕ್ಕೆ ಮನಸೋತು ಚಿತ್ರ ನಿರ್ದೇಶಕರ ಮುಡಿಗೇರಿತು ಗ್ರೀನ್ ಆಸ್ಕರ್!!

Gandhi Village Awards | ರಾಜ್ಯದ 233 ಗ್ರಾಮ ಪಂಚಾಯತಿಗಳಿಗೆ "ಗಾಂಧಿಗ್ರಾಮ ಪುರಸ್ಕಾರ" ಪ್ರಧಾನ

Please login to join discussion

Like Us on Facebook

Follow Us on Twitter

Recent News

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026

AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

March 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d