ಬೆಂಗಳೂರು, ಜು.12 www.bengaluruwire.com : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ (BWSSB) ಜಲರೇಚಕ ಯಂತ್ರಗಾರದ ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಕಾವೇರಿ 1 ಮತ್ತು 2ನೇ ಹಂತದ ನೀರು ಪೂರೈಕೆಯಾಗುವ ಪ್ರದೇಶಗಳಲ್ಲಿ ಇದೇ 13ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕಾವೇರಿ 4ನೇ ಹಂತದ ಒಂದನೇ ಘಟ್ಟದ ಎರಡು ಪಂಪ್ ಗಳನ್ನು ಕಾಮಗಾರಿ ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾಗುತ್ತಿದೆ.
ನೀರು ಪೂರೈಕೆ ವ್ಯತ್ಯವಾಗುವ ಪ್ರಮುಖ ಪ್ರದೇಶಗಳು: ನೇತಾಜಿನಗರ, ನಾಗಮ್ಮನಗರ, ಕೇಶವನಗರ, ಕೆ.ಪಿ. ಅಗ್ರಹಾರ, ರಾಘವೇಂದ್ರ ಕಾಲೊನಿ, ಟಿಪ್ಪು ನಗರ, ಚಾಮರಾಜಪೇಟೆ, ಬ್ಯಾಂಕ್ ಕಾಲೊನಿ, ಗುರುರಾಜ್ ಲೇಔಟ್, ವಿವೇಕಾನಂದ ನಗರ, ಎನ್.ಆರ್. ಕಾಲೊನಿ, ಬನಶಂಕರಿ 1ನೇ ಹಂತ, ಶಾಂತಲಾನಗರ, ಶಾಂತಿನಗರ, ಈಜೀಪುರ, ಅಶೋಕನಗರ, ದೊಮ್ಮಲೂರು 2ನೇ ಹಂತ, ಎಂ.ಜಿ. ರಸ್ತೆ, ಹಲಸೂರು, ಆಡುಗೋಡಿ, ಕೋರಮಂಗಲ ವಿಲೇಜ್, ಎಸ್.ಜಿ. ಪಾಳ್ಯ, ಜೋಗಿ ಕಾಲೊನಿ, ವಿ.ವಿ. ಪುರ, ಟೆಲಿಕಾಂ ಲೇಔಟ್, ಪಾದರಾಯನಪುರ, ಬಸವನಗುಡಿ, ಗೌಡನಪಾಳ್ಯ, ಆರ್ಬಿಐ ಕಾಲೊನಿ, ಜೀವನ್ ಭೀಮಾ ನಗರ, ಹೊಸೂರು ರಸ್ತೆ, ರಾಜರಾಜೇಶ್ವರಿನಗರ, ಕೆಂಗೇರಿ, ವಿಜಯನಗರ, ಮಹಾಲಕ್ಷ್ಮಿ ಲೇಔಟ್, ಬಸವೇಶ್ವರ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.
ಈ ಕೆಳಕಂಡ ಏರಿಯಾಗಳಲ್ಲಿ ನಾಳೆ ನೀರು ಪೂರೈಕೆ ಸ್ಥಗಿತವಾಗಲಿದೆ :