ನವದೆಹಲಿ, ಜೂ.25 www.bengaluruwire.com : ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಎರಡನೇ ಹಂತದ ಯೋಜನೆಯಡಿ ಮೆಟ್ರೋ ರೈಲು ಮಾರ್ಗಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಕೇಂದ್ರದ ಮಹಾರತ್ನ ಉದ್ಯಮ ಆರ್ ಇಸಿ (REC) 3,045 ಕೋಟಿ ರೂ. ಆರ್ಥಿಕ ಸಹಾಯ ನೀಡುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ವಿದ್ಯುತ್ ಸಚಿವಾಲಯದ ಮಹಾರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿರುವ ಆರ್ ಸಿ
ಲಿಮಿಟೆಡ್, 2023 ರ ಜೂನ್ 24 ರಂದು ಬೆಂಗಳೂರಿನಲ್ಲಿ ನಡೆದ REC ಯ ಮಂಡಳಿಯ ಸಭೆಯಲ್ಲಿ ಬಿಎಂಆರ್ ಸಿಲ್ ನ ಪ್ರಸ್ತಾವನೆಯನ್ನು ಮಂಡಳಿಯು ಅನುಮೋದಿಸಿತು.
ನಮ್ಮ ಮೆಟ್ರೋದ ಹಂತ-II ಯೋಜನೆಯು ಹಂತ-I ರ ಅಸ್ತಿತ್ವದಲ್ಲಿರುವ ಎರಡು ಕಾರಿಡಾರ್‌ಗಳ ವಿಸ್ತರಣೆಯನ್ನು ಒಳಗೊಂಡಿದೆ. ಅವುಗಳೆಂದರೆ ಪೂರ್ವ-ಪಶ್ಚಿಮ ಕಾರಿಡಾರ್ ಮತ್ತು ಉತ್ತರ-ದಕ್ಷಿಣ ಕಾರಿಡಾರ್ ಮತ್ತು 2 ಹೊಸ ಮಾರ್ಗಗಳಾಗಿದೆ. ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರಕ್ಕೆ ಹಾಗೂ ಇನ್ನೊಂದು ಕಾಳೇನ ಅಗ್ರಹಾರದಿಂದ ನಾಗವಾರದ ಎರಡು ಹೊಸ ಮಾರ್ಗಗಳಾಗಿದೆ. ಈ ಮಾರ್ಗಗಳು ನಗರದ ಕೆಲವು ದಟ್ಟವಾದ ಮತ್ತು ಹೆಚ್ಚಿನ ಸಂಚಾರ ದಟ್ಟಣೆಯ ಪ್ರದೇಶಗಳನ್ನು ಹಾದು ಹೋಗುತ್ತವೆ.
ಮೆಟ್ರೋ ಎರಡನೇ ಹಂತದ ಯೋಜನೆಯು ನಗರದ ಮಧ್ಯೆ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಜನನಿಬಿಡ ನಗರದಲ್ಲಿ ಸಂಚಾರವನ್ನು ಸುಗಮಗೊಳಿಸುತ್ತದೆ. ಎರಡನೇ ಹಂತದ ಮೆಟ್ರೋ ಕಾಮಗಾರಿ (72.09 ಕಿಮೀ) ಪೂರ್ಣಗೊಂಡಲ್ಲಿ, ನಮ್ಮ ಮೆಟ್ರೋದ ಸಂಯೋಜಿತ ಒಟ್ಟಾರೆ ಜಾಲವು 101 ನಿಲ್ದಾಣಗಳೊಂದಿಗೆ 114.39 ಕಿಮೀ. ಉದ್ದವಿರಲಿದೆ.
ಆರ್ ಇಸಿ ಲಿಮಿಟೆಡ್ ದೇಶಾದ್ಯಂತ ವಿದ್ಯುತ್ ವಲಯದ ಹಣಕಾಸು ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಬ್ಯಾಂಕೇತರ ಹಣಕಾಸು ನಿಗಮವಾಗಿದೆ. ಆದರೆ ಆರ್ ಇಸಿಯು ಬಿಎಂಆರ್ ಸಿಎಲ್ ಗೆ ಈ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡುತ್ತಿದೆ. 1969 ರಲ್ಲಿ ಸ್ಥಾಪನೆಯಾದ ಆರ್ ಇಸಿ ಲಿಮಿಟೆಡ್ ಐವತ್ತು ವರ್ಷಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.
ಇದು ಸಂಪೂರ್ಣ ವಿದ್ಯುತ್ ವಲಯಲ್ಲಿ ಉತ್ಪಾದನೆ, ಪ್ರಸರಣ, ವಿತರಣೆ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ ವಿವಿಧ ರೀತಿಯ ಯೋಜನೆಗಳ ಮೌಲ್ಯಯುತ ಕಾರ್ಯಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಈ ಉದ್ಯಮ ಎಷ್ಟು ಅಗಾಧವಾಗಿದೆಯೆಂದರೆ ಇದರ ನಿಧಿಯು ಭಾರತದಲ್ಲಿ ಪ್ರತಿ ನಾಲ್ಕನೇ ಬಲ್ಬ್ ಅನ್ನು ಬೆಳಗಿಸುವಷ್ಟು ವಿಸ್ತಾರತೆಯನ್ನು ಹೊಂದಿದೆ.