ಕಾಶ್ಮೀರ, ಜೂ.24 www.bengaluruwire.com : ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವರಾದ ಮೀನಾಕ್ಷಿ ಲೇಖಿ ಅವರು ಇಂದು ಇಲ್ಲಿನ ಗಡಿ ನಿಯಂತ್ರಣ ರೇಖೆ (LOC) ತೀತ್ವಾಲ್‌ನಲ್ಲಿರುವ ಶಾರದಾ ಯಾತ್ರಾ ದೇವಾಲಯಕ್ಕೆ ಭೇಟಿ ನೀಡಿದರು.
“ಈ ಸಂದರ್ಭದಲ್ಲಿ ಪ್ರಸ್ತುತ ಸರ್ಕಾರದ ಮೊದಲ ಕೇಂದ್ರ ಮಂತ್ರಿಯನ್ನು ಹೊಂದಲು ನಾವು ಸಂತೋಷಪಡುತ್ತೇವೆ” ಎಂದು ಶಾರದಾ ಉಳಿಸಿ ಸಮಿತಿಯ ಮುಖ್ಯಸ್ಥ ರವೀಂದರ್ ಪಂಡಿತ ಹೇಳಿದರು. ಈ ಹಿಂದೆ ಅವರು ಕುಪ್ವಾರ ಜಿಲ್ಲೆಯ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು.
ಶೃಂಗೇರಿ ಮಠವು ದಾನವಾಗಿ ನೀಡಿದ ಪಂಚಲೋಹ ಶಾರದಾ ಮೂರ್ತಿಯನ್ನು 2023ರ ಜನವರಿ 24ರಂದು (ಗುರು ತೃತ್ಯ – ಪ್ರಾಚೀನ ಕಾಲದಲ್ಲಿ ಶಾರದಾ ವಿಶ್ವವಿದ್ಯಾನಿಲಯದಲ್ಲಿ ವಾರ್ಷಿಕ ಘಟಿಕೋತ್ಸವದ ದಿನ) ಗಡಿ ನಿಯಂತ್ರಣ ರೇಖೆ ಬಳಿಯಿರುವ, ಕಾಶ್ಮೀರದ ತೀತ್ವಾಲ್ ನಲ್ಲಿ ಹೊಸದಾಗಿ ನಿರ್ಮಿಸಲಾದ ಶಾರದಾ ದೇವಾಲಯಕ್ಕೆ ಕೊಂಡೊಯ್ಯಲಾಯಿತು. 22ನೇ ಮಾರ್ಚ್ ಚೈತ್ರ ಮಾಸ ಶುಕ್ಲ ಪಕ್ಷದಂದು ತೀತ್ವಾಲ್ ದೇವಾಲಯದೊಳಗೆ ಪ್ರತಿಷ್ಠಾಪಿಸಲಾಯಿತು.
ಈ ದೇವಸ್ಥಾನವನ್ನು ಲೈವ್ ಸ್ಟ್ರೀಮಿಂಗ್ ಮೂಲಕ ಗೃಹ ಸಚಿವರಾದ ಅಮಿತ್ ಶಾ, ಎಲ್‌ಜಿ ಮನೋಜ್ ಸಿನ್ಹಾ, ಸಂಸದರಾದ ತೇಜಸ್ವಿ ಸೂರ್ಯ ಮತ್ತು ಶಾರದಾ ಸಮಿತಿಯ ಮುಖ್ಯಸ್ಥ ರವೀಂದರ್ ಪಂಡಿತ ಸಮ್ಮುಖದಲ್ಲಿ ಉದ್ಘಾಟಿಸಿದ್ದರು. ಆ ಸಂದರ್ಭದಲ್ಲಿ ಕರ್ತಾರ್‌ಪುರ ಕಾರಿಡಾರ್ ಮಾದರಿಯಲ್ಲಿ ಶಾರದಾ ಕಾರಿಡಾರ್ ಅನ್ನು ತೆರೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ರವೀಂದರ್ ಪಂಡಿತ ಅವರ ಪ್ರಶ್ನೆಗೆ ಅಮಿತ್ ಶಾ ಅವರು ಉತ್ತರಿಸಿದ್ದರು.