ಬೆಂಗಳೂರು, ಜೂ.8 www.bengaluruwire.com : ನೈರುತ್ಯ ಮುಂಗಾರು (South west Monsoon) ವಾಡಿಕೆಯಂತೆ ಒಂದು ವಾರ ತಡವಾದರೂ ಕೇರಳವನ್ನು ತಲುಪಿದ್ದು ಇನ್ನು 34 ಗಂಟೆಗಳ ಒಳಗಾಗಿ ಕರ್ನಾಟಕ, ತಮಿಳುನಾಡು ಹಾಗೂ ಪಾಂಡಿಚೆರಿಯನ್ನು ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ ನೈಋತ್ಯ ಮಾನ್ಸೂನ್ ಮಾರುತವು ನಕ್ಷೆಯ ಪ್ರಕಾರ ಜೂ.8ರಂದು ಕಣ್ಣೂರು -ಕೊಡೈಕೆನಾಲ್ ಮತ್ತು ಅಭಿರಾಮಪಟ್ಟಣಂ ಮೇಲೆ ಹಾದುಹೋಗುವ ದೈವಿಕ ಮಾನ್ಸೂನ್‌ನ ಉತ್ತರದ ಮಿತಿಯನ್ನು ತೋರಿಸುತ್ತಿತ್ತು.
ಜೂ.9ರ ಐಎಂಡಿ ಮುನ್ಸೂಚಬೆಯಂತೆ ಕೇರಳದಲ್ಲಿ ಗುಡುಗು ಮಿಂಚಿನಿಂದ ಕೂಡಿದ ಭಾರೀಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಗುಡಗು ಹಾಗೂ ಮಿಂಚು ಸಂಭವಿಸಲಿದೆ ಜಾಗೂ ರಾಜ್ಯದ ಕರಾವಳಿ ತೀರದಲ್ಲಿ ಗುಡುಗು ಮಿಂಚಿನ ಜೊತೆ ಬಲವಾದ ಮೇಲ್ಮೈ ಸುಳಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಿದೆ.
“ಗುರುವಾರ ಕೇರಳ ಕರಾವಳಿಗೆ ಮುಂಗಾರು ಮಾರುತ ಪ್ರವೇಶವಾಗಿದ್ದು, ಅಷ್ಟು ಶಕ್ತಿಯುತವಾಗಿಲ್ಲ. ಹಾಗಾಗಿ ಆ ನೈರುತ್ಯ ಮಾನ್ಸೂನ್ ಮಾರುತಗಳು ಕರ್ನಾಟಕ ಕರಾವಳಿ ದಾಟಲು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟವಾಗಿದೆ. ಮುಂದಿನ 10 ದಿನಗಳಲ್ಲಿ ರಾಜ್ಯದ ಒಳನಾಡು ಪ್ರದೇಶಕ್ಕೆ ನೈರುತ್ಯ ಮಾನ್ಸೂನ್ ಮಳೆ ಪ್ರವೇಶ ಕೊಡುವ ಸಾಧ್ಯತೆ ಕಂಡು ಬರುತ್ತಿಲ್ಲ” ಎಂದು ಕರ್ನಾಟಕ ನೈರ್ಸಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕರು ಹಾಗೂ ಜಲಭೂವಿಜ್ಞಾನಿಯಾಗಿರುವ ವಿ.ಎಸ್.ಪ್ರಕಾಶ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಬಿಪೂರ್ ಜಾಯ್ ಚಂಡಮಾರುತವು ಮುಂಗಾರು ಮಳೆಯ ತೀವ್ರತೆಯ ಮೇಲೆ ಪರಿಣಾಮ ಬೀರಲಿದೆ.