ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ. (MSIL) ಸಂಸ್ಥೆಯ ವತಿಯಿಂದ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಖ್ಯಮಂತ್ರಿ ಪರಿಹಾರ ನಿಧಿಗೆ 3 ಕೋಟಿ ರೂ ದೇಣಿಗೆಯನ್ನು ಹಸ್ತಾಂತರಿಸಲಾಯಿತು.
ಎಎಂಎಸ್ ಐಎಲ್ ಸಂಸ್ಥೆಯು ರಾಜ್ಯದ ಪ್ರಮುಖ ಸಾರ್ವಜನಿಕ ಉದ್ಯಮವಾಗಿದೆ. ಈ ಸಂಸ್ಥೆಯು ರೇಷ್ಮೆ ಸೀರೆ, ಸಗಟು ಮದ್ಯ, ರಿಟೇಲ್ ಮದ್ಯ ಮಾರಾಟ, ಚಿಟ್ ಫಂಡ್, ನೋಟ್ ಬುಲ್, ಸ್ಟೇಷನರಿ, ಸೋಲಾರ್ ವಾಟರ್ ಹೀಟರ್, ಪ್ರವಾಸೋದ್ಯಮ, ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಜನರಿಕ್ ಔಷಧಿ, ಮರಳು ಸೇರಿದಂತೆ ನಾನಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಾ ಬಂದಿದೆ.
ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವ ಸಂದರ್ಭದಲ್ಲಿ ಎಂ ಎಸ್ ಐ ಎಲ್ ಅಧ್ಯಕ್ಷ ಹರತಾಳು ಹಾಲಪ್ಪ, ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಕುಮಾರ್ ವಿಕಾಸ್, ಸಂಸ್ಥೆಯ ನಿರ್ದೇಶಕ ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.