ಬೆಂಗಳೂರು, ಜು.18 www.bengaluruwire.com : ರಾಜಧಾನಿ ಬೆಂಗಳೂರಿನ ಆರ್.ಆರ್. ನಗರದ ನ್ಯಾಶನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ಸ್ಕೂಲ್ ಇದಾಗಿದ್ದು, ನಿನ್ನೆ ರಾತ್ರಿ ಬಾಂಬ್ ಇಡೋದಾಗಿ ದುಷ್ಕರ್ಮಿಗಳು ಇ- ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ.
ಪ್ರಕರಣ ಸಂಬಂಧ ಆರ್.ಆರ್.ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಶನಲ್ ಸ್ಕೂಲ್ ಗೆ ಕಡೆ ಬಾಂಬ್ ಸ್ಕ್ವಾಡ್ ಧಾವಿಸಿ ಪರಿಶೀಲನೆ ನಡೆಸಿದವು.
ನ್ಯಾಶನಲ್ ಹಿಲ್ ವ್ಯೂವ್ ಸ್ಕೂಲ್ ನ ಯೂನಿಟ್ 3ಗೆ ಕಿಡಿಗೆಡಿಗಳು ಈ ಇ-ಮೇಲ್ ಮಾಡಿದ್ದಾರೆ. ಇಂದು ಬೆಳಗ್ಗೆ ಶಾಲೆಗೆ ಸಿಬ್ಬಂದಿ ಬಂದು ಎಂದಿನಂತೆ ಇ-ಮೇಲ್ ಪರಿಶೀಸುತ್ತಿದ್ದಾಗ ಬೆದರಿಕೆ ಇ-ಮೇಲ್ ಕೃತ್ಯ ಬೆಳಕಿಗೆ ಬಂದಿದೆ.
ಈ ವಿಷಯ ತಿಳಿದುಬರುತ್ತಿದ್ದಂತೆ ಆರ್ಆರ್ ನಗರ ಠಾಣೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸ್ಥಳಕ್ಕೆ ಧಾವಿಸಿ ತಪಾಸಣೆ ಕೈಗೊಂಡರು. ಈ ಹಿನ್ನೆಲೆಯಲ್ಲಿ ಯೂನಿಟ್ 1 ನಿಂದ ಯೂನಿಟ್ 2ಗೆ ಸುಮಾರು ಒಂದು ಸಾವಿರದ ಐದುನೂರು ಮಕ್ಕಳನ್ನು ಮಾಡಿದ್ದಾರೆ.
ಶಾಲೆಗೆ ಆಗಮಿಸಿದ ಡಿಕೆಶಿ ಪುತ್ರಿ ಐಶ್ವರ್ಯಾ ಶಿವಕುಮಾರ್, ಸಿಬ್ಬಂದಿ ಮತ್ತು ಪೊಲೀಸರ ಬಳಿ ಮಾಹಿತಿ ಪಡೆದರು. ಈ ಸುದ್ದಿ ತಿಳಿಯುತ್ತಿದ್ದಂತೆ ಭಯದಲ್ಲೇ ಪೋಷಕರು ಶಾಲೆ ಮುಂದೆ ಜಮಾಯಿಸಿದ್ದು, ಮಕ್ಕಳನ್ನ ನೋಡಬೇಕು ಎನ್ನುತ್ತಿದ್ದಾರೆ.
ಕೆಲವು ತಿಂಗಳ ಹಿಂದೆ ಇದೇ ರೀತಿ ಒಂದೇ ದಿನ ಹದಿನೈದಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕಳಿಹಿಸಲಾಗಿತ್ತು. ಆದರೆ ಅಲ್ಲಿ ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ. ಇ-ಮೇಲ್ ಕಳುಹಿಸಿದವರನ್ನು ಹುಡುಕಲು ಈವರೆಗೆ ಸಾಧ್ಯವಾಗಿಲ್ಲ. ಹೀಗಿದ್ದಾಗಲೆ ಮತ್ತೊಂದು ಶಾಲೆಗೆ ಬಾಂಬ್ ಬೆದಿರಿಕೆ ಇ-ಮೇಲೆ ಬಂದಿದೆ.