ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ ʻಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ (James Webb Space Telescope)ನಲ್ಲಿ ತೆಗೆದ ಅಪರೂಪದ ಚಿತ್ರಗಳು ಬ್ರಹ್ಮಾಂಡದ ವ್ಯಾಪ್ತಿಯನ್ನು ಜಗತ್ತಿಗೇ ತೆರೆದಿಟ್ಟಿದೆ. ವಿಶ್ವದ ಹುಟ್ಟಿನ ಅಧ್ಯಯನಕ್ಕೆ ಈ ಟೆಲಿಸ್ಕೋಪ್ ನೀಡಿರುವ ದತ್ತಾಂಶವು ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ.
ನಕ್ಷತ್ರಗಳ ಉಗಮ, ಅವಸಾನ, ಅವುಗಳ ರಚನೆ ಮತ್ತಿತರ ವಿಷಯಗಳ ಬಗ್ಗೆ ತಿಳಿಯಲು ಬಾಹ್ಯಾಕಾಶದ ಅತಿದೊಡ್ಡ ಟೆಲಿಸ್ಕೋಪ್ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯಕವಾಗಲಿದೆ. ಒಂದಕ್ಕಿಂತ ಒಂದು ಚಿತ್ರಗಳು ಖಗೋಳದ ಬಗ್ಗೆ ಕೌತುಕ ಹೊಂದಿದವರಿಗೆ ನಿಜಕ್ಕೂ ಬೆರಕು ಮೂಡಿಸುತ್ತಿದೆ.